More

    ನಾಲೆ ನಿರ್ಮಾಣ ವೈಜ್ಞಾನಿಕವಾಗಿರಲಿ; ಇಂಜಿನಿಯರ್‌ಗಳಿಗೆ ಸಂಸದ ಅಮರೇಶ್ವರ ನಾಯಕ ಸೂಚನೆ ದಿವಾಣದವರದೊಡ್ಡಿಗೆ ಭೇಟಿ


    ಹಟ್ಟಿಚಿನ್ನದಗಣಿ: ದಿವಾಣದವರದೊಡ್ಡಿ ಹತ್ತಿರ ಎನ್‌ಆರ್‌ಬಿಸಿ 35ನೇ ಕಿ.ಮೀ. ಮುಖ್ಯನಾಲೆ ಆಧುನೀಕರಣ ಕಾಮಗಾರಿ ಕೈಗೊಂಡಿದ್ದ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೈತರು ಕೆಬಿಜೆಎನ್‌ಎಲ್ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

    ಗುರುಗುಂಟಾದಿಂದ ಅಮರೇಶ್ವರ ನಡುವೆ ಇರುವ ನಾಲೆಯ 35ನೇ ಕಿ.ಮೀ.ನಿಂದ 45 ಕಿ.ಮೀ. ವರೆಗಿನ ಯಾವುದೇ ಉಪನಾಲೆಗೆ ನೀರು ಹರಿಯುತ್ತಿಲ್ಲ. ಒಂದು ವಾರ ಸುರಿದ ಸಣ್ಣ ಮಳೆಗೆ ಮುಖ್ಯ ಹಾಗೂ ವಿತರಣಾ ನಾಲೆ ಕೆಲವೆಡೆ ಕೊಚ್ಚಿ ಹೋಗಿವೆ. ಕೆಬಿಜೆಎನ್‌ಎಲ್ ಇಇ ನಾಮಕಾವಾಸ್ತೆ ಭೇಟಿ ನೀಡಿದ್ದರು. ಉಳಿದ ಅಧಿಕಾರಿಗಳು ಫೋನ್ ಕರೆ ಸ್ವೀಕರಿಸಿದೆ ನಿರ್ಲಕ್ಷೃ ತೋರಿದ್ದು, ಸಂಸದ ಬರುವ ಸುದ್ದಿ ತಿಳಿದು ನೀವು ಬಂದಿದ್ದೀರಿ ಎಂದು ಇಇ ಶಂಕರ್ ಖಿಮಾವತ್, ಎಸ್‌ಇ ಸಂಜೀವಕುಮಾರ್, ಜೆಇ ಬೈಲಪ್ಪರನ್ನು ರೈತರು ತೀವ್ರ ತರಾಟೆಗೆ ತೆಎದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts