ಮಕ್ಕಳ ಕಲಿಕಾಮಟ್ಟ ಪರಿಶೀಲನೆ

Kampli Tasil
ಕಂಪ್ಲಿ ಮಾರುತಿನಗರದ ಸರ್ಕಾರಿ ಕಿಪ್ರಾ ಶಾಲೆಯ ಮತಗಟ್ಟೆಗೆ ತಹಸೀಲ್ದಾರ್ ಗೌಸಿಯಾಬೇಗಂ ಭೇಟಿ ನೀಡಿ ವಿದ್ಯಾರ್ಥಿಯನ್ನು ಮಾತನಾಡಿಸಿ ಕಲಿಕಾ ಗುಣಮಟ್ಟ ಪರಿಶೀಲಿಸಿದರು.
Published on

ಕಂಪ್ಲಿ: ಪಟ್ಟಣದ ಮಾರುತಿನಗರದ ಸರ್ಕಾರಿ ಕಿಪ್ರಾ ಶಾಲೆಗೆ ತಹಸೀಲ್ದಾರ್ ಗೌಸಿಯಾಬೇಗಂ ಗುರುವಾರ ಭೇಟಿ ನೀಡಿ ಮಕ್ಕಳ ಕಲಿಕಾಮಟ್ಟ, ಮತಗಟ್ಟೆಗೆ ಅಗತ್ಯ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು.

ಸರ್ಕಾರದ ಆದೇಶದಂತೆ ಪಟ್ಟಣದ ಮತಗಟ್ಟೆಗಳಲ್ಲಿ ರ‌್ಯಾಂಪ್, ಶೌಚಗೃಹ, ವಿದ್ಯುತ್ ಸಂಪರ್ಕ, ಕುಡಿವ ನೀರು, ಕೊಠಡಿಗಳ ಸುಸ್ಥಿತಿ ಸೇರಿ ಮೂಲ ಸೌಕರ್ಯಗಳ ಕುರಿತು ಸುಮಾರು 35 ಮತಗಟ್ಟೆಗಳಿಗೆ ತೆರಳಿ ಪರಿಶೀಲಿಸಲಾಗಿದೆ ಎಂದು ತಹಸೀಲ್ದಾರ್ ಹೇಳಿದರು.

ನಂತರ ಗೌಸಿಯಾ ಬೇಗಂ, ಮಕ್ಕಳಿಂದ ಕನ್ನಡ ಪಠ್ಯ ಓದಿಸಿದರು. ಅವರೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು. ಮುಖ್ಯಶಿಕ್ಷಕ ರವೀಂದ್ರ, ಶಿಕ್ಷಕ ಜೋಗಿ ನಾಯಕ ರುದ್ರಪ್ಪ, ಕಂದಾಯ ನಿರೀಕ್ಷಕ ಜಗದೀಶ, ಗ್ರಾಮಲೆಕ್ಕಾಧಿಕಾರಿ ವಿಜಯಕುಮಾರ್, ಪುರಸಭೆ ವಿಷಯ ನಿರ್ವಾಹಕ ಎಸ್.ಚಿದಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net