More

    ಎನ್‌ಇಪಿಯಿಂದ ಮಕ್ಕಳ ಕಲಿಕಾಮಟ್ಟ ಹೆಚ್ಚಳ; ಜವಾಹರ ನವೋದಯ ವಿದ್ಯಾಲಯ ಪ್ರಾಚಾರ್ಯ ಶೇಖರಬಾಬು

    ಹಾವೇರಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಿಂದಾಗಿ ಮಕ್ಕಳಲ್ಲಿ ಕಲಿಕಾಮಟ್ಟ ಹೆಚ್ಚಳವಾಗಿದ್ದು, ಬಹಳ ಆಸಕ್ತಿಯಿಂದ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮಕ್ಕಳ ಪಾಲಕರೂ ಇದರಿಂದ ಸಂತೃಪ್ತರಾಗಿದ್ದಾರೆ ಎಂದು ಹಾನಗಲ್ಲ ತಾಲೂಕು ಮಹಾರಾಜಪೇಟೆಯ ಜವಾಹರ ನವೋದಯ ಮಹಾವಿದ್ಯಾಲಯದ ಪ್ರಚಾರ್ಯ ಶೇಖರಬಾಬು ಹೇಳಿದರು.
    ನಗರದ ವಾರ್ತಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದ ಪಾಠದ ಜತೆಗೆ ಪ್ರಾಯೋಗಿಕ ಕಲಿಕೆಗೆ ಎನ್‌ಇಪಿಯಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ. ಇದರಿಂದ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಎನ್‌ಇಪಿ ಜಾರಿಯಿಂದಾಗಿ ಶಿಕ್ಷಣ ಮಾದರಿಯಲ್ಲಿ ಬದಲಾವಣೆಯಾಗಿದೆ. ಕೌಶಲಭರಿತ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಕರಿಗೂ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.
    ಈ ವೇಳೆ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಉಮೇಶ ಎಚ್.ಕೆ., ಶಿಕ್ಷಕರಾದ ಶುಭಾಂಗಿ ನೆನೆ, ಮಂಜುನಾಥ, ಜಿಲ್ಲಾ ವಾರ್ತಾಧಿಕಾರಿ ರಂಗನಾಥ, ಇತರರಿದ್ದರು.
    3ನೇ ವಾರ್ಷಿಕೋತ್ಸವ 29ರಂದು
    2020ರಲ್ಲಿ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೊಳಿಸಿದ್ದು, ಜು.29ರಂದು ಕೆವಿ ಹಾಗೂ ನವೋದಯ ಶಾಲೆಗಳಲ್ಲಿ ಮೂರನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ನವದೆಹಲಿಯ ಐಟಿಪಿಒ ಪ್ರಗತಿ ಮೈದಾನದಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮೂರನೇ ವಾರ್ಷಿಕೋತ್ಸವ ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಉಮೇಶ ಎಚ್.ಕೆ. ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts