ಸಿಎಚ್‌ಸಿಗೆ ಲಕ್ಷ್ಯ ತಂಡ ಭೇಟಿ, ಪರಿಶೀಲನೆ

Kampli Health
ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲಕ್ಷ್ಯ ರಾಷ್ಟ್ರೀಯ ಮೌಲ್ಯಮಾಪನ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು. ತಂಡದ ಸದಸ್ಯರಾದ ವಿ.ಮಂಜುಳಾ, ನಾಗವೇಣಿ ಹಾಗೂ ಡಾ.ರವೀಂದ್ರ ಕನಕೇರಿ, ಡಾ.ಶ್ರೀನಿವಾಸರಾವ್, ಡಾ.ವೀರೇಶ್ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ಲಕ್ಷ್ಯ (ಲೇಬರ್ ರೂಮ್ ಗುಣಮಟ್ಟ ಸುಧಾರಣೆ ಯೋಜನೆ) ರಾಷ್ಟ್ರೀಯ ಮೌಲ್ಯಮಾಪನ ತಂಡ ಭೇಟಿ ನೀಡಿ, ಹೆರಿಗೆ ಕೋಣೆ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಪರಿಶೀಲಿಸಿತು.

ಮಹಾರಾಷ್ಟ್ರದ ಎಆರ್‌ಸಿಎಚ್ ಅಧಿಕಾರಿ ಡಾ.ಕದಂ ಸಂಜಯ್ ರಾಮ್ ರಾವ್, ತಮಿಳುನಾಡಿನ ಹಿರಿಯ ಶುಶ್ರೂಷಕಿ ವಿ..ಮಂಜುಳಾ ಅವರು ಹೆರಿಗೆ ಕೋಣೆ, ಹೆರಿಗೆ ಶಸ್ತ್ರ ಚಿಕಿತ್ಸಾ ಕೊಠಡಿ, ಆಸ್ಪತ್ರೆಯ ವಾತಾವರಣ, ಸೌಲಭ್ಯಗಳು, ದಾಖಲೆಗಳನ್ನು ಪರಿಶೀಲಿಸಿದರು. ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಸಾರ್ವಜನಿಕ ಆರೋಗ್ಯ, ಹೆರಿಗೆ ಸೇವೆಯಲ್ಲಿ ಆರೈಕೆ, ಗುಣಮಟ್ಟ ಪರಿಶೀಲನೆಗೆ ಲಕ್ಷ್ಯ ತಂಡ ಆಗಮಿಸಿ ಪರಿಶೀಲಿಸುತ್ತದೆ ಎಂದು ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ ತಿಳಿಸಿದರು.

ಜಿಲ್ಲಾ ಗುಣಮಟ್ಟ ವ್ಯವಸ್ಥಾಪಕಿ ನಾಗವೇಣಿ, ಕಚೇರಿ ಅಧೀಕ್ಷಕಿ ಶಶಿಕಲಾ, ಅರವಳಿಕೆ ತಜ್ಞ ಡಾ.ವೀರೇಶ್, ನೋಡಲ್ ಅಧಿಕಾರಿ ಡಾ.ಶ್ರೀನಿವಾಸರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net