More

    ಸಾರ್ವಜನಿಕ ಆಸ್ಪತ್ರೆಗೆ ಲಕ್ಷ್ಯ ತಂಡ ಭೇಟಿ

    ಲಿಂಗಸುಗೂರು: ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಲಕ್ಷ್ಯ ತಂಡ ಸೋಮವಾರ ಭೇಟಿ ನೀಡಿ ರಾಷ್ಟ್ರ ಮಟ್ಟದ ಮೌಲ್ಯಮಾಪನ ಮಾಡಿದರು.

    ಇದನ್ನೂ ಓದಿ: ಆನೇಕಲ್ ಕೆರೆ ಪರಿಶೀಲಿಸಿದ ಹಸಿರೀಕರಣ ಸಮಿತಿ, ಪರೀಕ್ಷೆಗಾಗಿ ವಿವಿಧ ಕೆರೆಯ ನೀರು ಸಂಗ್ರಹ, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸ್ಥಳೀಯರ ಬೇಸರ

    ಪಟ್ಟಣದ 100 ಹಾಸಿಗೆ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 260 ರಿಂದ 300 ರವರೆಗೆ ಹೆರಿಗೆ, ಆಸ್ಪತ್ರೆಯ ಮಾನವ ಸಂಪನ್ಮೂಲಗಳನ್ನು ಬಳಸಿ ನಿಗದಿತ ಸೇವೆಗಿಂತ ಹೆಚ್ಚಿನ ಮಟ್ಟದಲ್ಲಿ ಸೇವೆ ಒದಗಿಸುವುದು, ತಾಯಿ ಮತ್ತು ನವಜಾತ ಶಿಶುಗಳ ಕಾಯಿಲೆ ಮತ್ತು ಮರಣದ ಪ್ರಮಾಣ ಕಡಿಮೆ ಇರುವುದು,

    ಹೆರಿಗೆ ಮತ್ತು ಹೆರಿಗೆ ನಂತರದ ಹಾರೈಕೆ ಗುಣಮಟ್ಟ ಸುಧಾರಣೆ, ತಜ್ಞ ವೈದ್ಯರು, ತಂತ್ರಜ್ಞರು, ಸಿಬ್ಬಂದಿಗಳ ಗುಣಮಟ್ಟ ಸೇವೆ, ಆಸ್ಪತ್ರೆ ಸ್ವಚ್ಛತೆ ಸೇರಿ ಇನ್ನಿತರೆ ಮೂಲಭೂತ ಸೌಲಭ್ಯಗಳ ಕುರಿತು ರಾಷ್ಟ್ರ ಮಟ್ಟದ ಮೌಲ್ಯ ಮಾಪಕರಾದ ಡಾ.ಎ.ಸುಕಮಾರ ಹಾಗೂ ಬಿ.ಪದ್ಮಜಾ ರಾಣಿ ಮೌಲಮಾಪನ ಮಾಡಿದರು.

    ಮೌಲ್ಯಮಾಪನದಲ್ಲಿ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ ಫಲಿತಾಂಶ ಪ್ರಕಾರ ಲಕ್ಷ್ಯ ಪ್ರಮಾಣಿಕೃತ ಸೌಲಭ್ಯಗಳ ಬ್ರಾಂಡಿಂಗ್ ಮಾಡಲಾಗುತ್ತದೆ. ಶೇ 90, ಶೇ 80 ಮತ್ತು ಶೇ 70 ಕ್ಕಿಂತ ಹೆಚ್ಚು ಅಂಕ ಗಳಿಸುವ ಸೌಲಭ್ಯಗಳಿಗೆ ಅನುಗುಣವಾಗಿ ಪ್ಲಾಟಿನಂ,

    ಚಿನ್ನ ಮತ್ತು ಬೆಳ್ಳಿಯ ಬ್ಯಾಡ್ಜ್ ನೀಡಲಾಗುತ್ತದೆ. ಬ್ಯಾಡ್ಜ್ ಅನ್ವಯ ಕ್ರಮವಾಗಿ 6 ಲಕ್ಷ ರೂ. 3 ಲಕ್ಷ ರೂ. ಮತ್ತು 6 ಲಕ್ಷ ರೂ ಪ್ರೋತ್ಸಾಹ ಧನವನ್ನು ಆಸ್ಪತ್ರೆಗೆ ನೀಡಲಾಗುತ್ತದೆ ಎಂದು ಹೇಳಿದರು.

    ಮುಖ್ಯಾಡಳಿತ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಡಾ.ದಿಗಂಬರ್, ಡಾ.ಪೃತ್ವಿರಾಜ್, ಲ್ಯಾಬ್ ಟೆಕ್ನಿಷನ್ ರವಿ, ಸುರೇಶ, ಚಿದಾನಂದಸ್ವಾಮಿ ಇದ್ದರು.

    ಹೇಳಿಕೆ: ಆಸ್ಪತ್ರೆಯಲ್ಲಿ ಪ್ರಮುಖವಾಗಿ ಹೆರಿಗೆ ಹಾರೈಕೆ, ತಾಯಿ-ಮಗು ಮರಣ ಪ್ರಮಾಣ ಕಡಿಮೆ, ವೈದ್ಯ-ಸಿಬ್ಬಂದಿಗಳ ಸೇವೆ ಮತ್ತು ಸೌಲಭ್ಯಗಳ ಕುರಿತು ರಾಷ್ಟ್ರ ಮಟ್ಟದ ಮೌಲ್ಯಮಾಪನ ಮಾಡಲಾಯಿತು.

    ಸಾರ್ವಜನಿಕರಿಗೆ, ರೋಗಿಗಳಿಗೆ ಉತ್ತಮ ಸೇವೆ ಒದಗಿಸುವತ್ತ ವೈದ್ಯ-ಸಿಬ್ಬಂದಿಗಳು ಹೆಚ್ಚಿನ ಗಮನ ಹರಿಸಲಾಗುತ್ತಿದೆ ಡಾ.ರುದ್ರಗೌಡ ಪಾಟೀಲ್, ಮುಖ್ಯಾಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಲಿಂಗಸುಗೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts