ಸಿರಿಧಾನ್ಯ ಪ್ರೋತ್ಸಾಹಕ್ಕೆ ವಿಶೇಷ ಕಾರ್ಯಕ್ರಮ

Kampli skdrpd rohit
ರೋಹಿತಾಕ್ಷ
Published on

ಕಂಪ್ಲಿ: ತಾಲೂಕಿನಲ್ಲಿ ಸಿರಿಧಾನ್ಯ ಕೃಷಿ ಮತ್ತು ಬಳಕೆಗೆ ಪ್ರೋತ್ಸಾಹ ನೀಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.

ಇಲ್ಲಿನ ಎಸ್‌ಕೆಡಿಆರ್‌ಡಿಪಿ ಕಚೇರಿಯಲ್ಲಿ ಸೋಮವಾರ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.

ರೈತರಿಗೆ ಕಡಿಮೆ ದರದಲ್ಲಿ ಯಂತ್ರಶ್ರೀ ಮೂಲಕ ಭತ್ತ ಬೇಸಾಯಕ್ಕೆ ಯಂತ್ರ ಸೌಲಭ್ಯ ಕಲ್ಪಿಸಲಾಗುವುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ಸಿರಿಧಾನ್ಯ ಬೆಳೆಯಲು ಕಡಿಮೆ ದರದಲ್ಲಿ ಬೀಜ ಒದಗಿಸಿ, ಇಳುವರಿ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು.

ತಾಲೂಕಿನ 16 ಜ್ಞಾನವಿಕಾಸ ಕೇಂದ್ರಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸುವುದು, 25 ಗೋಬರ್ ಗ್ಯಾಸ್ ಘಟಕಗಳ ಅಳವಡಿಕೆ, ಬಹುವಾರ್ಷಿಕ ತೋಟಗಾರಿಕೆ ಸಸಿ ವಿತರಿಸಲಾಗುವುದು ಎಂದು ತಿಳಿಸಿದರು.

ಯೋಜನಾಧಿಕಾರಿ ಹಾಲಪ್ಪ, ತಾಲೂಕು ಸಮನ್ವಯ ಅಧಿಕಾರಿ ರೇಖಾ, ಕೃಷಿ ಮೇಲ್ವಿಚಾರಕ ಸಂಜೀವಕುಮಾರ್, ಕಚೇರಿ ವ್ಯವಸ್ಥಾಪಕ ಮುರುಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net