ಧರ್ಮಸ್ಥಳ ಸಂಸ್ಥೆಯಿಂದ ವಾತ್ಯಲ್ಯ ಮನೆ

14M.D.R.2
ಮದ್ದೂರು ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಯಲ್ಯ ಕಾರ್ಯಕ್ರಮದಡಿ ಆಸರೆಯಿಲ್ಲದ ಕುಟುಂಬಗಳಿಗೆ ವಾತ್ಯಲ್ಯ ಮನೆಯನ್ನು ಶ್ರದ್ಧಾ ಅಮೀತ್ ಹಸ್ತಾಂತರಿಸಿದರು. ಜಯರಾಮ ನೆಲ್ಲಿತ್ತಾಯ, ವಿಠ್ಠಲ್, ಎಂ.ಚೇತನಾ, ರತ್ನಾ ಇತರರು ಇದ್ದರು.
Published on

ಮದ್ದೂರು: ಮಹಿಳೆಯರು ಸಂಘಗಳಲ್ಲಿ ಸೇರ್ಪಡೆಯಾಗಿ ಸ್ವ ಉದ್ಯೋಗಗಳನ್ನು ಮಾಡಿಕೊಂಡರೆ ವೃದ್ಧಾಪ್ಯದಲ್ಲಿ ಕಷ್ಟಪಡುವಂತಹ ಪರಿಸ್ಥಿತಿ ಇರುವುದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಪುತ್ರಿ, ಎಸ್‌ಡಿಎಂ ಇನ್ಸಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನ ಬೆಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮೀತ್ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿ ಅಡಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಯಲ್ಯ ಕಾರ್ಯಕ್ರಮದಡಿ ಆಸರೆಯಿಲ್ಲದ ಕುಟುಂಬಗಳಿಗೆ ವಾತ್ಯಲ್ಯ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾತ್ಸಲ್ಯ ಯೋಜನೆಯಡಿ ಆಸರೆಯಿಲ್ಲದ ಕುಟುಂಬಗಳನ್ನು ಗುರುತಿಸಿ, ಮನೆ ನೀಡುತ್ತಿರುವುದರಿಂದ ಹಲವಾರು ಕುಟುಂಬಗಳಿಗೆ ಅನುಕೂಲವಾಗಲಿದೆ. ವಾತ್ಯಲ್ಯ ಸ್ವಸಹಾಯ ಸಂಘದಲ್ಲಿ 17 ಸಾವಿರಕ್ಕೂ ಹೆಚ್ಚಿನ ಸದಸ್ಯರಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ವಯಸ್ಸಾದ ಸಂದರ್ಭದಲ್ಲಿ ಹಿರಿಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದ್ದು, ಮಹಿಳೆಯರು ಸಂಘದಲ್ಲಿ ಆರ್ಥಿಕ ಸಹಾಯ ಪಡೆದು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ತಾಲೂಕಿನಲ್ಲಿ 95 ಹಾಗೂ ರಾಜ್ಯದಲ್ಲಿ 13531 ಜನರಿಗೆ ಪ್ರತಿ ತಿಂಗಳು ತಲಾ 1 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ ಹಾಗೂ ತಾಲೂಕಿನಲ್ಲಿ 4 ವಾತ್ಯಲ್ಯ ಮನೆ, 5 ಶೌಚಗೃಹ ಮತ್ತು ರಾಜ್ಯದಲ್ಲಿ 355 ವಾತ್ಸಲ್ಯ ಮನೆಗಳನ್ನು ನಿರ್ಮಾಣ ಮಾಡಿ, ಆಸರೆ ಇಲ್ಲದ ಕುಟುಂಬಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಯೋಗೀಶ್ ಕನ್ಯಾಡಿ, ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜ್ಞಾನವಿಕಾಸ ವಿಭಾಗದ ನಿರ್ದೇಶಕ ವಿಠ್ಠಲ್, ಜಿಲ್ಲಾ ನಿರ್ದೇಶಕಿ ಎಂ.ಚೇತನಾ, ಪ್ರಾದೇಶಿಕ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ರತ್ನಾ, ತೇಜಾವತಿ, ತಾಲೂಕಿನ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net