ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಭೂಪ! ವೈದ್ಯರು ಕಕ್ಕಾಬಿಕ್ಕಿ

13062021 Kampli Snake man
Published on

ಕಂಪ್ಲಿ (ಬಳ್ಳಾರಿ): ತಾಲೂಕಿನ ಉಪ್ಪಾರಳ್ಳಿಯ ಯುವಕ ಕಾಡಪ್ಪ, ತನಗೆ ಕಚ್ಚಿದ ಜೀವಂತ ಹಾವಿನೊಂದಿಗೆ ಶನಿವಾರ ಸಂಜೆ ಆಸ್ಪತ್ರೆಗೆ ಬಂದು, ವೈದ್ಯರು ಮತ್ತು ನೆರೆದಿದ್ದವರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದರು.

ಹೊಲದಲ್ಲಿ ಕೆಲಸ ಮಾಡುವಾಗ ಕಾಡಪ್ಪರ ಎಡಮುಂಗೈಗೆ ನಾಗರಹಾವು ಕಚ್ಚಿದೆ. ತಕ್ಷಣವೇ ಅದೇ ಹಾವನ್ನ ಕೈಯಲ್ಲಿಡಿದು, ಸಂಬಂಧಿ ಜತೆ ಬೈಕ್ ಮೇಲೆ ಮೆಟ್ರಿ ವೈದ್ಯರೊಬ್ಬರ ಬಳಿ ಬಂದಿದ್ದಾರೆ. ಹಾವು ನೋಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ. ನಂತರ ವೈದ್ಯರ ಸಲಹೆಯಂತೆ ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಇಲ್ಲೂ ಜೀವಂತ ಹಾವು ಕಂಡು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು ಹೌಹಾರಿದ್ದಾರೆ. ಕೂಡಲೇ ಹಾವನ್ನ ಬಿಡುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಹಾವನ್ನು ಕೆಳಗೆ ಬಿಟ್ಟಾಗ ಅದನ್ನು ಸುತ್ತಲಿದ್ದ ಜನರು ಬಡಿದು ಸಾಯಿಸಿದ್ದಾರೆ. ನಂತರ ಕಾಡಪ್ಪಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳ್ಳಾರಿ ವಿಮ್ಸ್‌ಗೆ ಕಳುಹಿಸಿದ್ದಾರೆ. ಸದ್ಯ ವಿಮ್ಸ್‌ನಲ್ಲಿ ಕಾಡಪ್ಪ ಆರೋಗ್ಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net