ಕಂಬಳ ಅದ್ಭುತ ಕಲಾಪ್ರಕಾರಗಳಲ್ಲಿ ಒಂದು

gan-8
Published on

ಕುಂದಾಪುರ: ಕಂಬಳ ಕಾರ್ಯಕ್ರಮದ ಆಯೋಜನೆಯ ಹಿಂದಿನ ತಿಂಗಳುಗಳ ಕಾಲದ ಸಂಘಟಕರ ಶ್ರಮ ಹೊರಜಗತ್ತಿಗೆ ಕಾಣಿಸೋದೆ ಇಲ್ಲ. ಕಂಬಳ ಕೇವಲ ಪಾರಂಪರಿಕ ಉತ್ಸವ ಮಾತ್ರವಲ್ಲ. ಇದು ಸಾಹಸಮಯ, ಅದ್ಭುತ ಕಲಾಪ್ರಕಾರಗಳಲ್ಲಿ ಒಂದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟರು.

ಹೊಸಾಡು ಗ್ರಾಪಂ ಮುಳ್ಳಿಕಟ್ಟೆಯ ‘ನಗು ಸಿಟಿ’ ಮೈದಾನದಲ್ಲಿ ಬೈಂದೂರು ತಾಲೂಕು ರೈತ ಸಂಘ ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಜೋಡುಕರೆ ಕಂಬಳ ಸಹಿತ ಐದು ದಿನಗಳ ರೈತೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಂದೂರು ತಾಲ್ಲಕು ರೈತ ಸಂಘ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೆ.ಗುಣಪಾಲ್ ಕಡಂಬ, ಉದ್ಯಮಿ ಭೋಜರಾಜ್ ಶೆಟ್ಟಿ ಬೈಂದೂರು, ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ ಬಾರ್ಕೂರು ಶಾಂತಾರಾಮ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಜಿಪಂ ಮಾಜಿ ಸದಸ್ಯ ಇರ್ವತ್ತೂರು ಉದಯ್ ಕೋಟ್ಯಾನ್, ಜಿಲ್ಲಾ ಕಂಬಳ ತೀರ್ಮಾನಕರ ಸಮಿತಿ ಪ್ರಮುಖರಾದ ವಿಜಯ್‌ಕುಮಾರ ಕಂಗಿನಮನೆ, ಗಿರೀಶ್ ಬೈಂದೂರು, ಚಂದ್ರಶೇಖರ ಪೂಜಾರಿ ಆರಾಟೆ, ಮಂಜುನಾಥ ಪೂಜಾರಿ ಸಸಿಹಿತ್ಲು, ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಉದ್ಯಮಿ ಸುಧಾಕರ ಶೆಟ್ಟಿ ಅಲ್ಸಾಡಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಡ್ಕೆ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ ಗಂಗೊಳ್ಳಿ, ಪ್ರಮುಖರಾದ ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಪ್ರಿಯದರ್ಶಿನಿ ಬೆಸ್ಕೂರು, ಚಿತ್ತರಂಜನ್ ಹೆಗ್ಡೆ ಕಟ್ಟಿನಮಕ್ಕಿ, ನಾಗರಾಜ್ ಶೆಟ್ಟಿ ನಾರ್ಕಳಿ, ಜಗದೀಶ್ ಪೂಜಾರಿ ಹರ್ಕಾಡಿ, ಶಿವರಾಜ್ ಶೆಟ್ಟಿ ಹುಂಚಣಿ, ಶ್ರೀಧರ ಬಿಜೂರು, ರಮೇಶ್ ಆಚಾರ್ಯ ಹೊಸಾಡು, ರಮೇಶ್ ಪೂಜಾರಿ ಯಳ್‌ಜಿತ್, ಜಗನ್ನಾಥ ಮೊಗವೀರ ಉಪ್ಪುಂದ, ಉಮೇಶ್ ಮೇಸ್ತ ಗುಜ್ಜಾಡಿ, ಹರೀಶ್ ಮೇಸ್ತ ಗುಜ್ಜಾಡಿ, ರಾಘವೇಂದ್ರ ಗುಜ್ಜಾಡಿ ಉಪಸ್ಥಿತರಿದ್ದರು. ರೈತ ಸಂಘ ಪ್ರಧಾನ ಕಾರ್ಯದರ್ಶಿ ಆನಂದ ಖಾರ್ವಿ ಉಪ್ಪುಂದ ನಿರೂಪಿಸಿದರು. ಸುಜೇಂದ್ರ ಡಿ.ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net