ಕಮಲ್‌ಹಾಸನ್ ಹೇಳಿಕೆ ಖಂಡನೀಯ

30mnv02
ಮಾನ್ವಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮವನಿ ಸಲ್ಲಿಸಿದರು. ವೇದಿಕೆ ತಾಲೂಕು ಘಟಕದ ಅಧ್ಯಕ್ಷ ನರಸಿಂಹ, ತಾಲೂಕು ಗೌರವಾಧ್ಯಕ್ಷ ಕಾರ್ಯದರ್ಶಿ ಕೆ.ಶಿವಕುಮಾರ, ಉಪಾಧ್ಯಕ್ಷ ಭೀಮಣ್ಣ ಮುದ್ಗಲ್, ಕಾರ್ಯದರ್ಶಿ ದೀಪಕ್ ಯಾದವ್ ಇತರರಿದ್ದರು.
Published on

ಮಾನ್ವಿ: ನಟ ಕಮಲ್‌ಹಾಸನ್ ಹೇಳಿಕೆ ಖಂಡಿಸಿ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು.

ವೇದಿಕೆ ತಾಲೂಕು ಘಟಕದ ಅಧ್ಯಕ್ಷ ನರಸಿಂಹ ಮಾತನಾಡಿ, ನಟ ಕಮಲ್‌ಹಾಸನ್ ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿರುವುದು ಸರಿಯಲ್ಲ. ಕನ್ನಡ ಭಾಷೆಯ ಇತಿಹಾಸ, ಪ್ರಾಚೀನತೆಗೆ, ಘನತೆ , ಗೌರವಕ್ಕೆ ಧಕ್ಕೆ ತಂದಿದ್ದರೆ. ಜೂ.5 ರಂದು ಬಿಡುಗಡೆಯಾಗುವ ಚಿತ್ರವನ್ನು ಬಹಿಷ್ಕರಿಸಲಾಗುವುದು ಹಾಗೂ ಕಪ್ಪುಪಟ್ಟಿ ಧರಿಸಿ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಲಾಗುವುದು ಎಂದರು. ತಾಲೂಕು ಗೌರವಾಧ್ಯಕ್ಷ ಕಾರ್ಯದರ್ಶಿ ಕೆ.ಶಿವಕುಮಾರ, ಉಪಾಧ್ಯಕ್ಷ ಭೀಮಣ್ಣ ಮುದ್ಗಲ್, ಕಾರ್ಯದರ್ಶಿ ದೀಪಕ್ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net