ಬೈಕ್ ಸ್ಕಿಡ್ ಆಗಿ ಕಲ್ಲಾಪೂರದ ದೈಹಿಕ ಶಿಕ್ಷಕ ಸಾವು

NRD BIKE ACCIDENT
Published on

ನರಗುಂದ: ಬೈಕ್ ಸ್ಕೀಡ್ ಆಗಿ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಲಾಪೂರ ಗ್ರಾಮದ ಮುಳಗುಂದವರ ಜಮೀನಿನ ಹತ್ತಿರ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ಕಲ್ಲಾಪೂರದ ನಿಂಗಬಸಪ್ಪ ಸಂಕಪ್ಪ ಆಡಿನ (50) ಮೃತ ಶಿಕ್ಷಕ ಎಂದು ತಿಳಿದು ಬಂದಿದೆ. ಇವರು ಕೊಣ್ಣೂರಿನಿಂದ ಬೈಕ್​ನಲ್ಲಿ ಅತೀ ವೇಗವಾಗಿ ಕಲ್ಲಾಪೂರಕ್ಕೆ ಆಗಮಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಈ ಕುರಿತು ಶಿಕ್ಷಕನ ಪತ್ನಿ ಸಾವಿತ್ರಿ ಆಡಿನ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಪಿಐ ಮಲ್ಲಯ್ಯ ಮಠಪತಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net