ಕುಸಿಯುವ ಭೀತಿಯಲ್ಲಿ ಕಲ್ಲಮುಂಡ್ಕೂರು ಹರಿಯಾಳ ಕಾಲುಸಂಕ

web - kaalu sanka
ಕುಸಿಯುವ ಭೀತಿಯಲ್ಲಿರುವ ಕಲ್ಲಮುಂಡ್ಕೂರು ಹರಿಯಾಳ ಕಾಲು ಸಂಕ.
Published on

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಯಾಳ ಬಳಿಯ ಕಾಲುಸಂಕವನ್ನು ನಿರ್ಮಾಣ ಮಾಡಲಾಗಿದ್ದು, ಅದರ ತಡಗೋಡೆಯೀಗ ಮಳೆಯಿಂದಾಗಿ ಕುಸಿತಗೊಂಡಿದೆ. ಕಾಲು ಸಂಕ ಸಂಪೂರ್ಣ ಕುಸಿಯುವ ಹಂತದಲ್ಲಿದೆ.

ಉದ್ಘಾಟನೆಗೆ ಮುನ್ನವೇ ಅಪಾಯ

ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದ ವತಿಯಿಂದ ಈ ಕಾಲುಸಂಕ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ಸುಮಾರು 15 ಲಕ್ಷ ರೂ.ವಿನಿಯೋಗಿಸಲಾಗಿದೆ. ಕಾಲುಸಂಕ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಮುನ್ನವೇ ಅಪಾಯದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net