ಕಲ್ಲಡ್ಕ ರಸ್ತೆ ಕೆಸರುಮಯ

kesaru
2 ಕಿ.ಮೀ.ನಷ್ಟು ರಸ್ತೆ ಕೆಸರುಮಯವಾಗಿದೆ.
Published on

ಬಂಟ್ವಾಳ: ಸತತ ಮಳೆ ಸುರಿಯುತ್ತಿರುವ ರಸ್ತೆಗೆ ಸಂಬಂಧಿತ ಸಮಸ್ಯೆಗಳು ತಲೆ ಎತ್ತಲಾರಂಭಿಸಿವೆ. ಕಲ್ಲಡ ಫ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ರಸ್ತೆ ಸುಮಾರು 2 ಕಿ.ಮೀ ದೂರದ ತನಕ ಕೆಸರುಮಯವಾಗಿದೆ.

ಇದರ ಜತೆಗೆ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಪೈಕಿ ಒಂದಾಗಿರುವ ಕಲ್ಲಡ್ಕದಲ್ಲಿ ಇತ್ತೀಚೆಗಿನಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ರಸ್ತೆಯು ಕೆಸರುಗದ್ದೆಯಂತಾಗಿದೆ. ನೀರು ಸೂಕ್ತವಾಗಿ ಹರಿಯಲು ವ್ಯವಸ್ಥೆಗಳ ಕೊರತೆ ಇದ್ದು, ರಸ್ತೆ ಕೆಸರುಮಯವಾಗಲು ಮುಖ್ಯ ಕಾರಣ. ಆಡಳಿತದ ಗಮಕ್ಕೆ ಈಗಾಗಲೇ ಹಲವು ಬಾರಿ ಅನೇಕರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದೆ ಎಂದು ಕಲ್ಲಡ್ಕ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net