ಸಜ್ಜನರ ಒಡನಾಟದಿಂದ ಒಳಿತು-ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ

kalikamba
ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಮಹೋತ್ಸವ ಜರುಗಿತು
Published on

ಬ್ರಹ್ಮಾವರ: ಮನುಷ್ಯರ ಆಹಾರ ವಿಹಾರ ವಿಚಾರ ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಉತ್ತಮ ವಿಚಾರಗಳು ಸಜ್ಜನರ ಒಡನಾಟ ಉತ್ತಮವಾದುದನ್ನೆ ಮಾಡುತ್ತದೆ ಎಂದು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.ಕಚ್ಚೂರು ಶ್ರೀಕಾಳಿಕಾಂಬಾ ಮಹಿಳಾ ಬಳಗ ವತಿಯಿಂದ ಲಕ್ಷ್ಮೀಕಾಂತ್ ಶರ್ಮ ಪ್ರಧಾನ ಆಚಾರ್ಯತ್ವದಲ್ಲಿ ಸಾಮೂಹಿಕ ಲಕ್ಷ ಕುಂಕುಮಾರ್ಚನೆ ಜರುಗಿತು.

ದೇವಸ್ಥಾನ ಆಡಳಿತ ಮೋಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರವೀಣ್ ಆಚಾರ್ಯ ರಂಗನಕೆರೆ, ಸುಬ್ರಾಯ ಆಚಾರ್ಯ ಮಣೂರು ಮತ್ತು ಮಹಿಳಾ ಬಳಗ ಅಧ್ಯಕ್ಷೆ ಸೌಮ್ಯಾ ಸುರೇಶ್ ಆಚಾರ್ಯ ಕಾರ್ಯದರ್ಶಿ ಚಂದ್ರಾವತಿ ವಾಸುದೇವ ಆಚಾರ್ಯ ಆಡಳಿತ ಮಂಡಳಿ, ಮಹಿಳಾ ಬಳಗದ ಸದಸ್ಯರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net