ಕೋಟ ಪಾಂಡೇಶ್ವರ ಕಳಿಬೈಲು ದೈವಸ್ಥಾನದಲ್ಲಿ ಗೆಂಡೋತ್ಸವ ಸಂಪನ್ನ

gendothsava
ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದಲ್ಲಿ ಶುಕ್ರವಾರ ಪೂರ್ವಾಹ್ನ ನಾಯರಿಬೆಟ್ಟು ರಮೇಶ್ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿತು
Published on

ಕೋಟ: ಪಾಂಡೇಶ್ವರ ಶ್ರೀ ಕ್ಷೇತ್ರ ಕಳಿಬೈಲು ತುಳಸಿ ಅಮ್ಮ ಶಿರಸಿ ಮಾರಿಕಾಂಬೆ, ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನದಲ್ಲಿ ಶುಕ್ರವಾರ ಪೂರ್ವಾಹ್ನ ನಾಯರಿಬೆಟ್ಟು ರಮೇಶ್ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು.

ಶ್ರೀ ತುಳಸಿ ಅಮ್ಮ ಶಿಲಾಮಯ ಬಿಂಬ ಪ್ರತಿಷ್ಠಾಪನೆ, ನವಕ ಪ್ರಧಾನ ಅದಿವಾಸ ಹೋಮ, ಕಲಶಾಭಿಷೇಕ, ಪ್ರಸಾದ ವಿತರಣೆ, ಭಗವಾನ್ ಬಬ್ಬುಸ್ವಾಮಿ ಪಂಜುರ್ಲಿ ದರ್ಶನ ಸೇವೆ, ಅನ್ನಸಂತರ್ಪಣೆ, ರಾತ್ರಿ ಗೆಂಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಗಾನ ನೃತ್ಯ ವೈಭವ. ಶನಿವಾರ ನೇಮೋತ್ಸವದ ಭಾಗವಾಗಿ ಪ್ರಸನ್ನ ಪೂಜೆ, ಚಪ್ಪರ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಯಕ್ಷಿ, ಪಂಜುರ್ಲಿ, ಗುರಮ್ಮ, ಮಲಸಾವರಿ, ಆಕಾಶರಾಹು, ಕೊರಗಜ್ಜ ಕೋಲ ಸೇವೆ ನಡೆಯಿತು.

ಶ್ರೀ ಕ್ಷೇತ್ರದ ದರ್ಶನ ಪಾತ್ರಿಗಳಾದ ನವೀನ್, ದೈವಸ್ಥಾನದ ಮೊಕ್ತೇಸರ ಎಂ.ಸಿ.ಚಂದ್ರಶೇಖರ್, ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net