ಅಪ್ಪನ ಕೆರೆ ದೋಣಿ ವಿಹಾರ ಸಂಭ್ರಮ ಜ.೧೩ರಂದು ಮತ್ತೆ ಪ್ರಾರಂಭ

Boating
Published on

* ಬೋಟಿಂಗ್‌ಗೆ Tommorow  ಚಾಲನೆ * ಪ್ರವಾಸಿಗರ ಬಹುದಿನಗಳ ಕನಸು ಇದೀಗ ಸಾಕಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಗರದ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ)ಯಲ್ಲಿ ಜನವರಿ ೧೩ರಂದು ಸಂಜೆ ೪ಕ್ಕೆ ದೋಣಿ ವಿಹಾರ ಮತ್ತೆ ಪ್ರಾರಂಭಗೊಳ್ಳಲಿದೆ ಎಂದು ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯP್ಷÀರೂ ಆದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಹೇಳಿದರು.

ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಪ್ರಕೃತಿ ರಮಣೀಯ ತಾಣ ಶರಣಬಸವೇಶ್ವರ ಕೆರೆಯನ್ನು ಅತ್ಯಾಧುನಿಕ ವಿನ್ಯಾಸಗಳೊಂದಿಗೆ ನವೀಕರಣಗೊಳಿಸಲಾಗಿದ್ದು, ಈಗ ಬೋಟಿಂಗ್ ನಡೆಸಲು ಸಜ್ಜುಗೊಳಿಸಲಾಗಿದೆ. ಇದರಿಂದ ಪ್ರವಾಸಿಗರ ಹಾಗೂ ದೋಣಿ ವಿಹಾರಿಗಳ ಬಹುದಿನಗಳ ಕನಸು ಸಾಕಾರಗೊಳ್ಳಲಿದೆ.

ಮೋಟಾರ್ ಬೋಟ್- ಪೆಡಲ್ ಬೋಟ್

ಬೋಟಿಂಗ್ ನಡೆಸಲು ಈ

ಗಾಗಲೇ ಪರವಾನಿಗೆ ಲಭ್ಯವಾಗಿದ್ದು, ಕೆರೆಯಲ್ಲಿ ಈಗ ೧೧ ಪೆಡಲï ಬೋಟ್ (ಕಾಲ್ತುಳಿತದ ದೋಣಿ)

ಮೂರು ಮೋಟಾರ್ ಬೋಟ್ (ಯಂತ್ರಚಾಲಿತ ದೋಣಿ) ಸಹಿತ ಒಟ್ಟು ೧೪ ಬೋಟ್‌ಗಳು ಸಾರ್ವಜನಿಕರ ವಿಹಾರಕ್ಕಾಗಿ ಸಿದ್ಧವಾಗಿದೆ. ಕೆರೆಯಲ್ಲಿ ದೋಣಿ ವಿಹಾರ ನಡೆಸುವವರಿಗೆ ನಿರೀP್ಷÀಣಾ ಸ್ಥಳ, ಟಿಕೆಟ್ ಕೌಂಟರ್, ಸುರP್ಷÀತಾ ಕಿಟ್ ಎಲ್ಲವೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.

ಕೆರೆಗೆ ಹೊಸ ಮೆರುಗು

ಶರಣಬಸವೇಶ್ವರ ಕೆರೆ ಈಗ ಪೂರ್ಣ ಪ್ರಮಾಣದಲ್ಲಿ ಸೌಂದರ್ಯೀಕರಣ ಹೊಂದಿದ್ದು ಇಡೀ ಆವರಣದಲ್ಲಿ ಪ್ರತಿಯೊಂದು ಕಡೆ ಆಕರ್ಷಕ ಮನರಂಜನಾತ್ಮಕ ಐಟಂಗಳೊAದಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಪಕ್ಷಿಪ್ರಿಯರು, ಪ್ರಕೃತಿ ಪ್ರಿಯರು, ಸ್ವಾದಿಷ್ಟ ಆಹಾರ ಪ್ರಿಯರು ಮತ್ತು ಪ್ರವಾಸಿಗರನ್ನು ಸಂತಸಪಡಿಸುವ ತಾಣವಾಗಿ ಎಲ್ಲರನ್ನು ಸ್ವಾಗತಿಸುತ್ತಿದೆ .ಮಕ್ಕಳು ಹಾಗೂ ಹಿರಿಯರು ಈಗ ದೋಣಿ ವಿಹಾರದ ಮೂಲಕ ಕೆರೆಯಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಆನಂದ ಸವಿಯಲು ಸುವರ್ಣಾವಕಾಶ ಸಿಗಲಿದೆ ಎಂದು ಬಾಜಪೇಯಿ ತಿಳಿಸಿದರು.

ಇನ್ನಷ್ಟು ಬೋಟ್ ಸೇರ್ಪಡೆ

ನಗರ ಮಧ್ಯದಲ್ಲಿ ದ್ವೀಪ ಒಳಗೊಂಡ ಅಪ್ಪನ ಕೆರೆಯಲ್ಲಿ ನೀರಿನ ಸಂಗ್ರಹ ಚೆನ್ನಾಗಿದ್ದು ಶೀಘ್ರದ¯್ಲೆÃ ಬನಾನ ರೈಡ್‌ಬೋಟ್ ಹಾಗೂ ವಾಟರ್ ಸ್ಕೂಟರ್ ಬೋಟ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಇದರಿಂದ ದೋಣಿ ವಿಹಾರಿಗಳಿಗೆ ಇನ್ನಷ್ಟು ಖುಷಿ ಸಿಗಲಿದೆ. ಶಾಲೆಗಳಿಂದ ಪ್ರವಾಸ ಕೈಗೊಳ್ಳುವವರಿಗೆ ಕೆರೆ ನೆಚ್ಚಿನ ತಾಣವಾಗಲಿದೆ. ಸಾರ್ವಜನಿಕರು ದೋಣಿ ವಿಹಾರದ ಸೌಲಭ್ಯ ಪಡೆದುಕೊಳ್ಳಲು ಕೋರಿದ್ದಾರೆ.

ಪ್ರವಾಸಿ ನಕ್ಷೆಗೆ ಕೆರೆ ಸೇರ್ಪಡೆ

ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರ ಸತತ ಪ್ರಯತ್ನದಿಂದ ಕೋವಿಡ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಕೆರೆಯನ್ನು ಪುನರ್ ನವೀಕರಣಗೊಳಿಸಲಾಗಿದೆ . ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ನವೀಕೃತ ಕೆರೆಯನ್ನು ಲೋಕಾರ್ಪಣೆ ಮಾಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೀಗ ಬೋಟಿಂಗ್ ಸೇರ್ಪಡೆಯು ಮತ್ತಷ್ಟು ಖುಷಿಯ ವಿಚಾರ ಎಂದು ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ಭರತ್ ಭೂಷಣ್ ತಿಳಿಸಿz್ದÁರೆ.

ಬೋಟಿಂಗ್ ಪ್ರಾರಂಭವಾಗುವುದರಿAದ ಸುರP್ಷÀತೆಗೆ ಆದ್ಯತೆ ನೀಡಲಾಗಿದ್ದು, ಮೂವರು ಸುರಕ್ಷಾ ವೀP್ಷÀಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಬೋಟಿಂಗ್‌ಗೆ ಟಿಕೆಟ್ ಶುಲ್ಕ ವಿಧಿಸಿದ್ದು, ಪೆಡಲï ಬೋಟ್‌ಗೆ ಒಬ್ಬರಿಗೆ ೫೦ ರೂ., ಮೋಟಾರ್ ಬೋಟಿಂಗ್‌ಗೆ ೮೦ ರಿಂದ ೧೦೦ ರೂ. ನಿಗದಿಪಡಿಸಲಾಗಿದೆ.

ಶುಚಿ-ರುಚಿಯಾದ ತಿಂಡಿ ತಿನಿಸುಗಳು ಕೆರೆಯ ಆವರಣದಲ್ಲಿ ಫುಡ್‌ಕೋರ್ಟ್ ಲಭ್ಯವಿದ್ದು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ಎಲ್ಲ ಸೌಲಭ್ಯಗಳಿಂದಾಗಿ ಅಪ್ಪನ ಕೆರೆಯು ಈಗ ಜಿ¯್ಲÉಯ ಪ್ರವಾಸಿ ನಕ್ಷೆಯಲ್ಲಿ ಸೇರ್ಪಡೆಗೊಂಡAತಾಗಿದೆ.

ಕೃಷ್ಣ ಬಾಜಪೇಯಿ,

ಅಧ್ಯಕ್ಷ, ಅಪ್ಪನ ಕೆರೆ ಅಭಿವದ್ಧಿ ಪ್ರಾಧಿಕಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net