ನಾಡಿದ್ದೇ ಕಲಾಸಿಪಾಳ್ಯ, ಕೆ.ಆರ್. ಮಾರುಕಟ್ಟೆ ಮರು ಆರಂಭ: ಆದರೆ ಇವೆಲ್ಲ ಷರತ್ತುಗಳ ಪಾಲನೆ ಕಡ್ಡಾಯ..

K R Market
Published on

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ನಿಂದ ಎರಡೂವರೆ ತಿಂಗಳು ಸ್ಥಗಿತಗೊಂಡಿದ್ದ ಕೆ.ಆರ್. ಮಾಕುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳನ್ನು ಜು.17ರಿಂದ ಪುನರ್ ಆರಂಭಿಸಲು ಬಿಬಿಎಂಪಿ ಅನುಮತಿ ನೀಡಿ ಆದೇಶಿಸಿದೆ. ಮಾರುಕಟ್ಟೆ ಸ್ಥಳಗಳಲ್ಲಿ ಹೆಚ್ಚು ಜನರು ಸೇರುವ ಉದ್ದೇಶದಿಂದ ಕೋವಿಡ್ ಸೋಂಕು ಹರಡಲು ಸಾಧ್ಯತೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಕೆ.ಆರ್. ಮಾರುಕಟ್ಟೆ ಕಟ್ಟಡದೊಳಗಿನ ವ್ಯಾಪಾರವನ್ನು ನಿರ್ಬಂಧಿಸಲಾಗಿತ್ತು. ಜತೆಗೆ, ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಹೊರ ವಲಯದಲ್ಲಿನ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು.

ಈಗ ಕೋವಿಡ್ ಪ್ರಕರಣ ಕಡಿಮೆಯಾಗಿದ್ದು, ಸರಾಸರಿ 500ಕ್ಕಿಂತ ಕಡಿಮೆಯಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪುನಾರಂಭಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಒಪ್ಪಿಗೆ ನೀಡಿದೆ. ಜತೆಗೆ, ಷರತ್ತು ಉಲ್ಲಂಘಿಸಿದಲ್ಲಿ ದಂಡ ವಿಧಿಸುವ ಎಚ್ಚರಿಕೆಯನ್ನು ಪಾಲಿಕೆ ನೀಡಿದೆ. 

ಷರತ್ತುಗಳು 

  • ಮಾರುಕಟ್ಟೆಯಲ್ಲಿ ಕೋವಿಡ್ ನಿಯಮ ಮತ್ತು ನಡಾವಳಿಗಳನ್ನು ಪಾಲಿಸಬೇಕು.
  • ವ್ಯಾಪಾರಿಗಳು, ಗ್ರಾಹಕರು ಕಡ್ಡಾಯ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಪಾಡಬೇಕು.
  • ಸಾರ್ವಜನಿಕರು ಮಳಿಗೆ ಮುಂದಿನ ಹಳದಿ ಚೌಕಟ್ಟಿನಲ್ಲಿ ನಿಂತು ವ್ಯಾಪಾರ ನಡೆಸಬೇಕು.
  • ಮಾರುಕಟ್ಟೆ ಮಳಿಗೆದಾರರು, ಗ್ರಾಹಕರು ಟೆಸ್ಟಿಂಗ್ ಮತ್ತು ಲಸಿಕೆ ಪಡೆಯಬೇಕು.
  • ಅಂಗಡಿ ಒಳಗೆ ಮತ್ತು ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು.
  • ಮಳಿಗೆ ಒಳಗೆ ಬರುವ ಗ್ರಾಹಕರಿಗೆ ಥರ್ಮಲ್ ಸ್ಕ್ಯಾನ್​ ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net