ಸಡಗರದ ಕಾಳಮ್ಮ ಜಾತ್ರಾ ಮಹೋತ್ಸವ

01 SARAG 4
Published on

ಸರಗೂರು: ತಾಲೂಕಿನ ಆಗತ್ತೂರು ಗ್ರಾಮದಲ್ಲಿ ಮಂಗಳವಾರ ಶ್ರೀ ಕಾಳಮ್ಮನವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.


ದೇವರ ವಿಗ್ರಹಗಳ ಮೆರವಣಿಗೆ ಮುಗಿದ ಬಳಿಕ ಹರಕೆ ಹೊತ್ತ ಭಕ್ತರು ಮಡಿಯಲ್ಲಿದ್ದುಕೊಂಡು ಅನ್ನ ತಿನ್ನುವ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಇದರೊಂದಿಗೆ ತಳಿರು ತೋರಣ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರ ವಿಗ್ರಹಕ್ಕೆ ಗಂಗೆ ಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಂದ ವಿವಿಧ ಸೇವಾ ಕಾರ್ಯಗಳು ಜರುಗಿದವು.


ಕಪಿಲಾ ನದಿಯಿಂದ ದೇವರ ಉತ್ಸವಮೂರ್ತಿ, ಆನೆ ವಿಗ್ರಹವನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸತ್ತಿಗೆ, ನಂದಿ ಕಂಬ ಸೇರಿದಂತೆ ಇನ್ನಿತರ ಕಲಾ ತಂಡಗಳ ಮೂಲಕ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಕರೆತರಲಾಯಿತು. ನಂತರ ದೇವತೆಗಳಿಗೆ ಅನ್ನ ಸಂತರ್ಪಣೆ ನಡೆಸಿ ಭಕ್ತಿ ಸಮರ್ಪಿಸಿದರು. ಹರಕೆ ಭಕ್ತರು ತಿನ್ನುವ ಅನ್ನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಜಮಾಯಿಸಿದ್ದರು. ಅನ್ನಸಂತರ್ಪಣೆ ನಡೆಯಿತು. ದೇವರ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.


ಗೋವಿಂದನಾಯಕ, ಮಲ್ಲೇಶ್‌ನಾಯಕ, ಪುಟ್ಟಶೆಟ್ಟಿ, ಜವರಶೆಟ್ಟಿ, ಸಿದ್ದಪ್ಪಾಜಿ, ಸಣ್ಣಯ್ಯ, ರಾಜೇಶ್, ಮಹದೇವನಾಯಕ, ನಾಗರಾಜು, ಅಂಕನಾಯಕ, ಪ್ರಸಾದ್, ರವಿಕುಮಾರ್, ದಾಸಪ್ಪ, ಜವರನಾಯಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net