

ಸ್ವಾಮೀಜಿ, ಮುಖಂಡ ಹೋರಾಟ | ಖರ್ಗೆ ರಾಜೀನಾಮೆಗೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದ ಕೋಲಿ ಸಮಾಜದ ಯುವಕ ದೇವಾನಂದ ಕೋರಬಾ ಸಾವಿನ ಕೇಸಿನ ಆರೋಪಿತರ ಬಂಧಿಸಬೇಕು, ಅವರ ಜತೆಗೆ ಶಾಮೀಲಾಗಿರುವ ಪೊಲೀಸರನ್ನು ಅಮಾನತ್ತುಗೊಳಿಸಬೇಕು ಸಾವಿನ ಸತ್ಯಾಂಶ ಬಯಲಿಗೆ ತರಲು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಮುಖಂಡರು, ಸ್ವಾಮೀಜಿಗಳು ಸೋಮವಾರದಿಂದ ನಗರದ ಜಿ¯್ಲÁಧಿಕಾರಿಗಳ ಕಚೇರಿಯ ಮುಂದೆ ನಿರಂತರ ಧರಣಿ ಆರಂಭಿಸಿದರು.
ಆರೋಪಿತರನ್ನು ಬಂಧಿಸುವವರೆಗೂ ಡಿಸಿ ಕಚೇರಿ ಮುಂದೆ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಧರಣಿ ನಡೆಸಲಾಗುತ್ತದೆ. ಸೋಮವಾರ ಹೋರಾಟ ಆರಂಭಿಸುವ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೋಲಿ ಸಮಾಜದ ಯುವಕರು ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಧರಣಿ ಕೈಗೊಂಡರು.
ದೇವಾನAದ ಸಾವಿನ ಪ್ರಕರಣ ಕುರಿತು ಜುಲೈ ೨೦ ರಂದು ಶಿವರಾಜ, ಸಿದ್ದನಗೌಡ, ಸಿದ್ದಪ್ಪ, ಅಣ್ಣಪ್ಪ ಎಂಬುವರ ವಿರುದ್ಧ ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಾದರೂ ಆರೋಪಿತರನ್ನು ಬಂಧಿಸಿಲ್ಲ. ಸಿಎಂ ಅವರನ್ನು ಭೇಟಿ ಮಾಡಿ ದೂರು ನೀಡಿz್ದೆÃವೆ. ಇಷ್ಟಿದ್ದರೂ ಆರೋಪಿತ ವ್ಯಕ್ತಿಯೊಬ್ಬರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಓಡಾಡಿಕೊಂಡಿದ್ದು, ಸಚಿವರೇ ಆರೋಪಿತರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೇವಾನಂದ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ತಪ್ಪು ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಹಾವೇರಿ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ವರಲಿಂಗ ಸ್ವಾಮಿಗಳು ಇನ್ನಿತರ ಮಠಾಧೀಶರು ಭಾಗಿಯಾಗಿ ಬೆಂಬಲಿಸಿದರು.
ಸಮಿತಿ ಸಂಚಾಲಕ ಅವಣ್ಣ ಮ್ಯಾಕೇರಿ, ಸಮಾಜದ ಮುಖಂಡರಾದ ಶರಣಪ್ಪ ತಳವಾರ, ಬಸವರಾಜ ಬೂದಿಹಾಳ, ಸಂತೋಷ ತಳವಾರ, ಶಾಂತಪ್ಪ ಕೂಡಿ, ಬಸವರಾಜ ಹರವಾಳ, ಅಂಬು ಡಿಗ್ಗಿ, ನಿಂಗಣ್ಣ ದೇವಣಗಾಂವ, ಸೋಮಶೇಖರ ಬಿಬ್ಬಳ್ಳಿ, ಬಿ.ಎಸ್.ಐನಾಪುರ.ರಮೇಶ ನಾಟೀಕಾರ, ಬಸವರಾಜ ಸಪ್ಪನಗೋಳ, ನಿಂಗಣ್ಣ ದೇವಣಗಾಂವ, ಗುಂಡು ಐನಾಪುರ, ಮೋಹನ ಪಾಟೀಲ್, ರಾಮಲಿಂಗ ಬಾನರ್, ಅನಿಲಕುಮಾರ ಚಿಂಚೋಳಿ, ಮಲ್ಲಿಕಾರ್ಜುನ ಸೇಡಂ, ಶರಣಪ್ಪ ನಾಟೀಕಾರ ಆಳಂದ,ರೇವಣಸಿದ್ದಪ್ಪಗೌಡ ಕಮಾನಮನಿ ಜೇವರ್ಗಿ, ಸೂರ್ಯಕಾಂತ ಅವರಾದ ಕಮಲಾಪುರ, ಅವಣ್ಣಗೌಡ ಪಾಟೀಲ್,ಮಲ್ಲು ಮರಗುತ್ತಿ, ಪೀತಾಂಬರ ಕಲಗುರ್ತಿ, ರಾಜೇಂದ್ರ ಜಮಾದಾರ, ಮಲ್ಲಿಕಾರ್ಜುನ ಯಮನೂರ, ತಮ್ಮಣ್ಣ ಡಿಗ್ಗಿ, ಸಾಯಿಬ