ಕಲಘಟಗಿ ತಾಲೂಕು ಮಟ್ಟದ ಪಪೂ ಕಾಲೇಜ್ ಕ್ರೀಡಾಕೂಟ ನಾಳೆಯಿಂದ

30 klg5- sports
Published on

ಕಲಘಟಗಿ ತಾಲೂಕು ಮಟ್ಟದ ಕ್ರೀಡಾಕೂಟವು ಪಟ್ಟಣದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆ. 31 ಹಾಗೂ ಸೆ. 1ರಂದು ಜರುಗಲಿವೆ ಎಂದು ಗುಡ್ ನ್ಯೂಸ್ ಸಂಸ್ಥೆಯ ಪ್ರಭಾರಿ ಕಾರ್ಯದರ್ಶಿ ರೆ.ಬ್ರ ವರ್ಗಿಸ್ ಕೆ.ಜೆ. ಹೇಳಿದರು.

ಪಟ್ಟಣದ ಗುಡ್ ನ್ಯೂಸ್ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲೂಕು ಮಟ್ಟದ ಈ ಕ್ರೀಡಾಕೂಟಕ್ಕೆ 7 ಪದವಿ ಪೂರ್ವ ಮಹಾವಿದ್ಯಾಲಯದ 824 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವೈಯಕ್ತಿಕ ಹಾಗೂ ಗುಂಪು ಆಟಗಳ ಸೇರಿ 20ಕ್ಕೂ ಅಧಿಕ ಕ್ರೀಡೆಗಳು ನಡೆಯಲಿವೆ ಎಂದರು.

ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಭಾರಿ ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ, ಧಾರವಾಡ ಜಿಲ್ಲಾ ಕ್ರೀಡಾ ಸಂಯೋಜಕ ಯು.ಎನ್. ಹಜಾರೆ, ಪ್ರಾಚಾರ್ಯ ನವೀನಾ ರಡೇರ, ದೈಹಿಕ ಶಿಕ್ಷಕ ರಾಮು ಲಮಾಣಿ, ಶಂಕರ ಹೊನ್ನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net