ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಮಕ್ಕೆ ಒತ್ತಾಯ

31 KURUGODU.2
ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುರುಗೋಡು ಸಿಪಿಐಎಂ ಪಕ್ಷದ ಪದಾಧಿಕಾರಿಗಳು ಪಿಎ??? ಸುಪ್ರೀತ್ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು.
Published on

ಕುರುಗೋಡು: ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ಕುರುಗೋಡು ಸಿಪಿಐಎಂ ಪಕ್ಷದ ಪದಾಧಿಕಾರಿಗಳು ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪಗೆ ಮನವಿ ಸಲ್ಲಿಸಿದರು.

ಕಾರ್ಯದರ್ಶಿ ಗಾಳಿ ಬಸವರಾಜ್ ಮಾತನಾಡಿ, ಮಹಿಳೆಯರ ಘನತೆಗೆ ಕುಂದುಂಟುಮಾಡುವಂತೆ ಪ್ರಭಾಕರ್ ಭಟ್ ಮಾತನಾಡಿದ್ದಾರೆ. ಧರ್ಮಗಳ ನಡುವೆ ಕೋಮು ವಿಷ ಬೀಜ ಬಿತ್ತುತ್ತಿದ್ದು, ದೇವರ ಹೆಸರಲ್ಲಿ ಜನರನ್ನ ಅನ್ಯಧರ್ಮದ ಮೇಲೆ ದ್ವೇಷಕ್ಕೆ ಪ್ರಚೋದಿಸುತ್ತಿರುವುದು ಕಂಡುಬರುತ್ತಿದೆ.

ಆದ್ದರಿಂದ, ದ್ವೇಷ ಬಿತ್ತುವ ಭಾಷಣಗಳನ್ನು ಮಾಡುವ ವ್ಯಕ್ತಿಯನ್ನು ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಶಿವಶಂಕರ್, ಸಮಿತಿಯ ಸದಸ್ಯರಾದ ಟಿ.ಅಮೀನ್ ಸಾಬ್, ಟಿ.ಹಸೇನ್ ಸಾಬ್, ಎ.ಮಂಜುನಾಥ್, ಯು.ಶಂಕ್ರಪ್ಪ, ಎನ್.ಹುಲುಗಪ್ಪ, ಸಣ್ಣ ಕೆಂಚಪ್ಪ, ಪಿ. ಚಾಂದ್ ಪಾ? ಸೇರಿ ಮತ್ತಿರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net