ರಾಷ್ತ್ರೀಯ ಕ್ರೀಡಾಕೂಟಕ್ಕೆ ಕಲಬುರಗಿ ಐವರು ಆಯ್ಕೆ

ಹರಿಯಾಣದ ಹಿಸ್ಸಾರ್‌ನಲ್ಲಿ ಜ.೫ರಿಂದ ೯ರವರೆಗೆ ನಡೆಯಲಿರುವ ೬೭ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ
Sports
Published on


ಕಲಬುರಗಿ: ಹರಿಯಾಣದ ಹಿಸ್ಸಾರ್‌ನಲ್ಲಿ ಜ.೫ರಿಂದ ೯ರವರೆಗೆ ನಡೆಯಲಿರುವ ೬೭ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ್ ಹೇಳಿದರು. ಬೇರಿ ಕಾಲೇಜಿನ ಶೇಖ್ ಸೂಫಿಯಾನ್, ಎಂಎಸ್‌ಐ ಕಾಲೇಜಿನ ಸನಫ್, ಎಸ್‌ಬಿ ಕಾಲೇಜಿನ ಮೋಹಿತ್, ಗುರುಕುಲ ಕಾಲೇಜಿನ ಕುನಾಲ್ ಜಾಜಿ ಹಾಗೂ ಎಸ್‌ಬಿಆರ್ ಕಾಲೇಜಿನ ಶ್ರೇಯಾ ಆಯ್ಕೆಯಾಗಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ವಿದ್ಯಾರ್ಥಿಗಳು ಜಿ¯್ಲÁ ಹ್ಯಾಂಡ್‌ಬಾಲï ಅಸೋಸಿಯೇಷನ್ ಅಡಿ ತರಬೇತಿ ಪಡೆದಿದ್ದು, ಡಿಸೆಂಬರ್‌ನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಈಗ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕಲಬುರಗಿಯಿಂದ ಸೋಮವಾರ ಬೆಂಗಳೂರು ಮೂಲಕ ಹರಿಯಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದರು. ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಝಳಕಿ, ತರಬೇತುದಾರರಾದ ಪ್ರವೀಣ ಪುಣೆ, ದತ್ತಾತ್ರೇಯ ಜೇವರ್ಗಿ, ಅಶೋಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net