ಕಲಬುರಗಿ ಏರ್ ಪೋರ್ಟ್ ರನ್‌ವೇ ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ೨೬ ಕೋಟಿ ಮಂಜೂರು: ಸಂಸದ ಡಾ.ಉಮೇಶ್ ಮಾಹಿತಿ

FB_IMG_1693015165247
Published on

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಂಸದ ಡಾ.ಜಾಧವ್ ಸಭೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಸೇಡಂ ರಸ್ತೆಯ ವಿಮಾನ ನಿಲ್ದಾಣ, ಕೇಂದ್ರೀಯ ವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಸಂಸದ ಡಾ.ಉಮೇಶ ಜಾಧವ್  ಕಾರ್ಯಚಟುವಟಿಕೆ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು.
ವಿಮಾನ ನಿಲ್ದಾಣ ಸಲಹಾ ಸಮಿತಿ ಅಧ್ಯP್ಷÀರೂ ಆದ ಸಂಸದ ಡಾ.ಉಮೇಶ ಜಾಧವ್ ಅಧ್ಯP್ಷÀತೆಯಲ್ಲಿ ನಡೆದ ಸಭೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಕುರಿತು ಪರಿಶೀಲನೆ ನಡೆಯಿತು.
ವಿಮಾನ ನಿಲ್ದಾಣದ ರನ್‌ವೇ ಮೇಲ್ದರ್ಜೆಗೇರಿಸುವುದಕ್ಕೆ ಸಂಬAಧಿಸಿದAತೆ ಚರ್ಚಿಸಲಾಯಿತು. ದೊಡ್ಡ ಮತ್ತು ಭಾರವಾದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಖಚಿತಪಡಿಸಿಕೊಳ್ಳುವುದನ್ನು ಗುರುತಿಸಿ, ಈ ಯೋಜನೆಗೆ ಹಣಕಾಸಿನ ನೆರವು ಪಡೆಯಲು ನಾಗರಿಕ ವಿಮಾನಯಾನ ಸಚಿವಾಲಯ ಸಂಪರ್ಕಿಸಿ ಮನವಿಪತ್ರ ಸಲ್ಲಿಸಲಾಗಿತ್ತು. ಕೋರಿಕೆ ಮೇರೆಗೆ ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿ, ೨೬ ಕೋಟಿ ರೂ.ಅನುದಾನ ಮಂಜೂರು ಮಾಡಿದೆ ಎಂದು ಹೇಳಿದರು.
ಸಮರ್ಪಕ ನೀರು ಸರಬರಾಜು, ವಿಮಾನ ನಿಲ್ದಾಣದಿಂದ ಕಲಬುರಗಿ ನಗರದವರೆಗೆ ಬೀದಿ ದೀಪ, ವಿಮಾನ ನಿಲ್ದಾಣದ ಆವರಣದ ಸುತ್ತಲೂ ಸುಧಾರಿತ ಭೂದೃಶ್ಯ ಮತ್ತು ಹಿರಿಯ ನಾಗರಿಕರಿಗೆ ಗಾಲಿಕುರ್ಚಿ ಒದಗಿಸುವ ಅಗತ್ಯತೆ ಕುರಿತು ಸಮಿತಿ ಸದಸ್ಯರು ಸಂಸದರ ಗಮನಕ್ಕೆ ತಂದರು. ವಿಮಾನ ನಿಲ್ದಾಣದ ತಡೆರಹಿತ ಕಾರ್ಯನಿರ್ವಹಣೆಗೆ ಅಗತ್ಯವಿರುವ ಈ ಪ್ರಮುಖ ಅಂಶ ಕುರಿತು ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿ¯್ಲÁಧಿಕಾರಿ ಕಚೇರಿಯಲ್ಲಿ ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಭೆ ಸೇರಿ ಚರ್ಚಿಸಲಾಗುವುದು ಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net