ಖಾಲಿ ಹುದ್ದೆ ಭರ್ತಿಗೆ ಸಿಡಿದ ಯುವಜನ

Student Strike
Student Strike
Published on
ಕಲಬುರಗಿ: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೆಪಿಎಸ್ಸಿ ಅಕ್ರಮಗಳನ್ನು ಖಂಡಿಸಿ ನಗರದಲ್ಲಿ ಸಹಸ್ರಾರು ವಿದ್ಯಾರ್ಥಿಗಳು, ಉದ್ಯೋಗಾಂಗಳು ಶುಕ್ರವಾರ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನಗರದ ಜಗತ್​ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್​ ಮೆರವಣಿಗೆ ನಡೆಸಿ, ಬಿಟ್ಟಿ ಭಾಗ್ಯ ಬೇಡ, ಉದ್ಯೋಗ ನೀಡಿ ಎಂದು ಘೋಷಣೆ ಮೊಳಗಿಸಿ, ಕೆಪಿಎಸ್ಸಿಯಲ್ಲಿ ಅಕ್ರಮ, ಹಗರಣ ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿದರು.
ಸಂಟನೆಯ ಜಿಲ್ಲಾಧ್ಯಕ್ಷ ಕಾಂತಕುಮಾರ ಮಾತನಾಡಿ, ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರ, ವಿದ್ಯಾರ್ಥಿಗಳಿಗೆ ನಿಧಾನ ವಿಷ ನೀಡುತ್ತಿದೆ. ವರ್ಷಗಟ್ಟಲೇ ಓದುತ್ತಿದ್ದರೂ ಅಧಿಸೂಚನೆಗಳು ಹೊರಬೀಳುತ್ತಿಲ್ಲ. ಸಚಿವ ಸಂಪುಟ ನಿರ್ಧರಿಸಿದ 56 ಸಾವಿರ ಹುದ್ದೆ ಭರ್ತಿ ಶುರು ಮಾಡಬೇಕು. ಮುಂದಿನ ಎಲ್ಲ ಪ್ರಕ್ರಿಯೆ ಕೆಇಎ ಮೂಲಕ ನಡೆಸಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ನೋಟಾ ಮತ ಚಲಾಯಿಸಲಾಗುವುದು ಎಂದರು.
ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಭಟನೆಗೆ 10 ಲಕ್ಷ ಬಾಂಡ್​ ಕೇಳುವ ಪೊಲೀಸರು ಉಸ್ತುವಾರಿ ಸಚಿವರ ಜೀರೋ ಟ್ರಾಫಿಕ್​ಗೆ ಎಷ್ಟು ಬಾಂಡ್​ ಪಡೆಯುತ್ತಾರೆ ತಿಳಿಸಲಿ. ನೇಮಕ ಶ್ರೀ ಮಾಡಲಿ ಎಂದರು.
ವಿದ್ಯಾರ್ಥಿನಿ ಭಾಗ್ಯಶ್ರೀ ಬಿ. ಜಮಖಂಡಿ ಮಾತನಾಡಿ, ಅತಿಥಿ ಶಿಕ್ಷಕರ ನೇಮಕದ ಮೂಲಕ ಯುವಕರ ಭವಿಷ್ಯದ ಜತೆ ಆಟವಾಡುತ್ತಿದ್ದು, ಭಿೆ ಬೇಕಿಲ್ಲ. ಕಾಯಂ ಉದ್ಯೋಗ ನೀಡಿ ಎಂದರು.
ಲಕ್ಷಿ$್ಮಕಾಂತ ಪೂಜಾರಿ ಮಾತನಾಡಿ, ಕೆಪಿಎಸ್ಸಿ ಪರೀಾ ಅಕ್ರಮದಿಂದ ಕೆಟ್ಟ ಪರಿಣಾಮ ಬೀರುತ್ತಿದೆ. ಕೆಪಿಎಸ್ಸಿಯನ್ನು ರ್ಬಕಾಸ್ತು ಮಾಡಬೇಕು. ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​ ವಿದ್ಯಾರ್ಥಿಗಳಿಗೆ ಬೆಂಬಲಿಸಿ, ಹೋರಾಟಗಾರರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಬಿಜೆಪಿ ಮುಖಂಡ ಚಂದು ಪಾಟೀಲ್​, ಸಿದ್ದರಾಮಯ್ಯ ಹಿರೇಮಠ, ಎಂ.ಎಸ್​ ಪಾಟೀಲ್​ ನರಿಬೋಳ, ಹಣಮಂತ ಶೇರಿ, ಮಲ್ಲಿಕಾರ್ಜುನ ಸಾರವಾಡ, ಶಿವಾ ಅಷ್ಟಗಿ, ಗುರುಶಾಂತ ಟೆಂಗಳಿ, ಸಚಿನ್​ ಕಡಗಂಚಿ, ಸಂದೀಪ ಭರಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net