ಕಿಟಕಿ ಅಳವಡಿಸುವ ವೇಳೆ ಬಿದ್ದು ಕಾರ್ಮಿಕ ಸಾವು

worker dies
worker dies
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ನಗರದಲ್ಲಿ ಘಟನೆ
  • ಕಿಟಕಿ ಅಳವಡಿಸುವ ವೇಳೆ ದುರಂತ, ಸ್ಥಳದಲ್ಲೇ ಸಾವು
ಕಲಬುರಗಿ: ಹಳೇ ಕಟ್ಟಡವೊಂದರ ಕಿಟಕಿ ಗ್ರಿಲ್​ ಅಳವಡಿಸುತ್ತಿದ್ದ ಕರ‍್ಮಿಕನೊಬ್ಬ ಎತ್ತರದಿಂದ ಬಿದ್ದು ಮೃತಪಟ್ಟ ಟನೆ ನಗರದ ಟಿಪ್ಪು ಚೌಕ್​ ಹತ್ತಿರದ ಅಕ್ಬರ್​ಬಾಗ್​ ಕಾಲನಿಯಲ್ಲಿ ನಡೆದಿದೆ. ಮಿಜಗುರಿ ನಿವಾಸಿ ಮಹಮ್ಮದ ತೌಫಿಕ್​ ಅಹಮ್ಮದ್​(೨೦) ಮೃತ ಕರ‍್ಮಿಕ. ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್​ ಮತ್ತು ಮನೆ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.
ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್​ ಬಳಿ ಒಂದು ತಿಂಗಳಿನಿಂದ ಮಹಮ್ಮದ ತೌಫಿಕ್​ ಅಹಮ್ಮದ್​ ಕೆಲಸಕ್ಕೆ ಹೋಗುತ್ತಿದ್ದ. ಮೇ ೧೩ರಂದು ಬೆಳಗ್ಗೆ ಟಿಪ್ಪು ಚೌಕ್​ ಹತ್ತಿರದ ಹಳೇ ಮನೆಯೊಂದರ ಕಿಟಕಿಗೆ ಗ್ರಿಲ್​ ಅಳವಡಿಸುವ ಕೆಲಸಕ್ಕೆ ತೌಫಿಕ್​ ತೆರಳಿದ್ದನು. ಸಂಜೆ ಸ್ಟೂಲ್​ ಮೇಲೆ ನಿಂತು ಕಿಟಕಿ ಗ್ರಿಲ್​ ಅಳವಡಿಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ.
ಗಂಭೀರ ಗಾಯಗಳಾಗಿದ್ದರು. ಸಹ ಕಾರ್ಮಿಕರು ಖಾಸಗಿ ಆಸ್ಪತ್ರೆಗೆ ಒಯ್ದಿದ್ದು, ಆಸ್ಪತ್ರೆ ತಲುಪುವ ವೇಳೆಗೆ ಕರ‍್ಮಿಕ ತೌಫಿಕ್​ ಅಹಮ್ಮದ್​ ಮೃತಪಟ್ಟಿದ್ದ. ಕಾರ್ಮಿಕನ ಸಾವಿಗೆ ಗುತ್ತಿಗೆದಾರ ಮಹಮ್ಮದ ಖಾಜಾ ಮೈನೋದ್ದೀನ್​ ಮತ್ತು ಮನೆ ಮಾಲೀಕ ಸುರಾ ಪರಿಕರ ಒದಗಿಸದೆ ರ‍್ನಿಲಕ್ಷ$್ಯ ಕಾರಣ ಎಂದು ಮೃತನ ತಂದೆ ದಾದೆ ಪಟೇಲ್​ ನೀಡಿದ ದೂರಿನಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net