

ಚಿಂಚೋಳಿ: ವೈಜನಾಥ ಪಾಟೀಲ್ ಅವರು ಕೇವಲ ನಾಯಕರಾಗಿರದೆ, ಹಿಂದುಳಿದ ಪ್ರದೇಶದ ಧ್ವನಿಯಾಗಿದ್ದರು. ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ ಹಾಗೂ ಮೂಲಸೌಕರ್ಯಗಳಲ್ಲಿ ನ್ಯಾಯ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿ ಅನುಷ್ಠಾನಕ್ಕಾಗಿ ತಮ್ಮ ಜೀವನವನ್ನೇ ಧಾರೆ ಎರೆದವರು ಎಂದು ಪ್ರೊ.ಶಾಂತವೀರ ಹೀರಾಪುರ ಬಣ್ಣಿಸಿದರು.
ಪಟ್ಟಣದ ಮಾಜಿ ಸಚಿವ ವೈಜನಾಥ ಪಾಟೀಲ್ ಅವರ ಸ್ಮಾರಕ ಸ್ಥಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 6ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಪಾಟೀಲ್ ಅವರು ಸತತ ಹೋರಾಟ ಮತ್ತು ನಿಸ್ವಾರ್ಥ ಸೇವೆಯ ಫಲವಾಗಿ ಇಂದು ಕಲ್ಯಾಣ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭಿಸಿದೆ. ಸರಳತೆ, ನೇರ ನುಡಿ ಹಾಗೂ ಜನಪರ ಕಾಳಜಿಯಿಂದ ಪಾಟೀಲ್ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಡಾ.ವಿಕ್ರಮ ಪಾಟೀಲ್, ಗೌತಮ ಪಾಟೀಲ್, ಡಾ.ಬಸವೇಶ ಪಾಟೀಲ್, ಉಮೇಶ ಪಾಟೀಲ್, ಗಜೇಂದ್ರ ಪಾಟೀಲ್, ಭಾರತಿ ಪಾಟೀಲ್, ಆರತಿ ಪಾಟೀಲ್, ರವಿರಾಜ ಕೊರವಿ, ಚಂದ್ರಶೇಖರ ಹರಸೂರ, ಪ್ರಭುಲಿಂಗ ಲೇವಡಿ, ಅಬ್ದುಲ್ ಬಾಸೀದ್, ಕೆ.ಎಂ. ಬಾರಿ, ಸುಭಾಷ ಸೀಳಿನ್, ಶಂಕರಗೌಡ ಅಲ್ಲಾಪುರ, ಭವಾನಿ ಪಾಟೀಲ್, ವಿರೂಪಾಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಕುಮಾರ ದೇಸಾಯಿ, ಆನಂದ ತಡಕಲ್, ಗೋಪಾಲರೆಡ್ಡಿ ಕೊಳ್ಳೂರ, ವಿರೇಶ ಯಂಪಳ್ಳಿ, ರಾಮಶೆಟ್ಟಿ ಪವಾರ್, ರಾಜು ಪವಾರ್, ಜಗನ್ನಾಥ ಗುತ್ತೇದಾರ್, ಅಶೋಕ ಚವ್ಹಾಣ್, ಗೋಪಾಲ ಜಾಧವ್, ಸಂತೋಷ ಗುತ್ತೇದಾರ್, ಸತೀಶ ಇಟಗಿ, ದೊಡ್ಡಪ್ಪಗೌಡ, ಗೌರಿಶಂಕರ ಉಪ್ಪಿನ್, ಆತೀಶ ಪವಾರ್, ಎಂ.ಎಸ್.ನರಿಬೋಳ ಇತರರಿದ್ದರು.