ಪೋಕ್ಸೋ: ನೊಂದ ತಾಯಿಯ ಲಂಚ ತಿಂದ ಇಬ್ಬರು ಪೊಲೀಸರು ಅಮಾನತು

police constable asi suspend
police constable asi suspend
Published on

ಪ್ರಮುಖ ಮುಖ್ಯಾಂಶಗಳು

  • ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಆದೇಶ
ಕಲಬುರಗಿ: ಪೋಕ್ಸೋ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಸಂತ್ರಸ್ತೆಯ ತಾಯಿ ಬಳಿ ಲಂಚಕ್ಕೆ ಕೈಒಡ್ಡಿ, ಸಾ ಸಮೇತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸ್ಟೇಷನ್​ ಬಜಾರ್​ ಪೊಲೀಸ್​ ಠಾಣೆಯ ಪೇದೆ, ಎಎಸ್​ಐಯನ್ನು ಅಮಾನತು ಮಾಡಿ, ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಆದೇಶಿಸಿದ್ದಾರೆ.
ಮಹಿಳಾ ಹೆಡ್​ ಕಾನ್ಸ್​ಟೇಬಲ್​ ಜ್ಯೋತಿ, ಎಎಸ್​ಐ ಶಿವಶರಣಪ್ಪ ಅಮಾನತು ಆದ ಲಂಚಕೋರ ಪೊಲೀಸರು. ಸ್ಟೇಷನ್​ ಬಜಾರ್​ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ಬಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟು, ಜೂ.7ರಂದು ಹಣ ಪಡೆಯುವ ವೇಳೆ ಸಾ ಸಮೇತ ಲೋಕಾಯುಕ್ತರ ಬಲೆಗೆ ಜ್ಯೋತಿ ಬಿದ್ದಿದ್ದಳು. ಅದರಲ್ಲಿ ಎಸ್​ಐ ಶಿವಶರಣಪ್ಪನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಪೋಕ್ಸೋ ಪ್ರಕರಣದಲ್ಲಿ ಸಹಾಯ ಮಾಡುವ ನೆಪದಲ್ಲಿ ಹಣದ ಬೇಡಿಕೆ ಇಟ್ಟಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ರಾಜ್ಯ ಪೊಲೀಸ್​ ನಿಯಮದಂತೆ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net