ಸಾರಿಗೆ ನೌಕರರ ಮುಷ್ಕರ 20ರಿಂದ

ksrtc worker
ksrtc worker
Published on

ಪ್ರಮುಖ ಮುಖ್ಯಾಂಶಗಳು

  • ವೇತನ ಬಾಕಿ, ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಮನವಿ
ಕಲಬುರಗಿ: ರಾಜ್ಯದ ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಸಂಪೂರ್ಣ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮೇ 20ರಿಂದ ಅರ್ನಿದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಬೇಡಿಕೆ ಈಡೇರಿಸುವವಗೆ ಮುಷ್ಕರ ಮುಂದುವರಿಯಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವ ಅರಸ್​ ತಿಳಿಸಿದರು.
ರಾಜ್ಯದ ನಾಲ್ಕು ಕಡೆ ಸಮಾವೇಶ ನಡೆಸಲಾಗುತ್ತಿದೆ. ನೌಕರರ ಇತರ ಸಮಸ್ಯೆ ಆಲಿಸಲಾಗುವುದು. ಪ್ರತಿ ಬಾರಿ ಮುಷ್ಕರ ಘೋಷಿಸಿದಾಗ ಮುಖಂಡರ ಜತೆ ಮಾತು, ಭರವಸೆ ಸಾಮಾನ್ಯವಾಗಿದೆ. ಏ.29ರ ಮುಷ್ಕರ ಘೋಷಿಸಿದರೂ ಸರ್ಕಾರ ಮಾತುಕತೆಗೆ ಆಹ್ವಾನಿಸಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಿತಿ ವಿಜಯ ಭಾಸ್ಕರ ಮಾತನಾಡಿ, ಸಾರಿಗೆ ನೌಕರರ ವಿಷಯದಲ್ಲಿ ಸರ್ಕಾರ ಧೋರಣೆ ಸರಿಯಲ್ಲ. ಕೋವಿಡ್​ ವೇಳೆ ಮೊದಲ ಹಂತದಲ್ಲಿ ನಿಂತು ಕೆಲಸ ಮಾಡಲಾಗಿದೆ. ಆಗ ಕೆಲಸ ಮಾಡಿದ ಹಣ ನೀಡಲು ಹಿಂದೆ&ಮುಂದೆ ನೋಡಲಾಗುತ್ತಿದೆ. ಕೂಡಲೇ ಸಾರಿಗೆ ಮಂತ್ರಿ ಬೇಡಿಕೆ ಈಡೇರಿಸಬೇಕು ಎಂದರು.
ಸಾರಿಗೆ 38 ತಿಂಗಳ ವೇತನ ಬಾಕಿ ನೀಡಬೇಕು. 2024ರ ಜನವರಿಯಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಬೇಕು, ಶೇ.25 ವೇತನ ಹೆಚ್ಚಿಸಬೇಕು, 26 ತಿಂಗಳ ಹಣ ಒಂದೇ ಕಂತಿನಲ್ಲಿ ಪಾವತಿಸಬೇಕು, ಾರಂ&4 ಸೇರಿ ಇತರೆ ಬೇಡಿಕೆ ಚರ್ಚಿಸಿ, ಈಡೇರಿಸಬೇಕು ಎಂದರು.
ಸಮಿತಿಯ ಎಚ್​.ಎಸ್​.ಮಂಜುನಾಥ, ಜಗದೀಶ, ನಾರಾಯಣ ಸ್ವಾಮಿ, ಚಂದ್ರಕಾಂತ ಗದ್ದಗಿ, ಸಿದ್ದಪ್ಪ ಪಾಲ್ಕಿ ಇತರರಿದ್ದರು.
ಜನರಿಗೆ ತೊಂದರೆ ಆಗದಿರಲಿ: ಮುಷ್ಕರದಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂಬುದು ತಿಳಿದಿದೆ. ಆದರೆ ನಮ್ಮ ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿದೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿದರೆ ಜನರಿಗೆ ತೊಂದರೆ ತಪ್ಪಲಿದೆ ಎಂದು ಸಮಿತಿಯ ಎಚ್​.ಎಸ್​.ಮಂಜುನಾಥ ಹೇಳಿದರು. ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡುವುದಾಗಿ ಸರ್ಕಾರ ಬೆದರಿಕೆ ಹಾಕಿ, ಧಮನಕಾರಿ ಆಗಿದ್ದು, ಮಾತುಕತೆ ಮೂಲಕ ಬೇಡಿಕೆ ಈಡೇರಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net