ಸಮನ್ವಯ ಕೊರತೆಗೆ ಸೊರಗಿದ ಪ್ರವಾಸೋದ್ಯಮ

ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸೋದ್ಯಮಿಗಳ ಮತ್ತು ಪಾಲುದಾರರ ಸಭೆಯನ್ನು ರಾಜ್ಯ ಹೋಟೆಲ್​ ಅಸೋಸಿಯೇಷನ್​ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಉದ್ಘಾಟಿಸಿದರು. ಪ್ಯಾಟ್ರಿಕ್​ ಜಾರ್ಜ್​, ಡಾ.ಸದಾನಂದ ಪೆರ್ಲ, ವಿನುತಾ, ಸಂಧ್ಯಾರಾಜ್​ ಇತರರಿದ್ದರು.
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸೋದ್ಯಮಿಗಳ ಮತ್ತು ಪಾಲುದಾರರ ಸಭೆಯನ್ನು ರಾಜ್ಯ ಹೋಟೆಲ್​ ಅಸೋಸಿಯೇಷನ್​ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಉದ್ಘಾಟಿಸಿದರು. ಪ್ಯಾಟ್ರಿಕ್​ ಜಾರ್ಜ್​, ಡಾ.ಸದಾನಂದ ಪೆರ್ಲ, ವಿನುತಾ, ಸಂಧ್ಯಾರಾಜ್​ ಇತರರಿದ್ದರು.
Published on
Summary

ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಅಭಿಪ್ರಾಯ

ಕಲಬುರಗಿಯಲ್ಲಿ ವಿಶ್ವ ಟೂರಿಸಂ ದಿನ

ಕಲಬುರಗಿ: ಜಿಲ್ಲೆಯ ಪ್ರವಾಸೋದ್ಯಮ ರಂಗ ಸೊರಗಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಉದ್ಯಮಿಗಳ ನಡುವಿನ ಸಮನ್ವಯದ ಕೊರತೆ ಮುಖ್ಯ ಕಾರಣ ಎಂದು ರಾಜ್ಯ ಹೋಟೆಲ್​ ಅಸೋಸಿಯೇಷನ್​ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಅಭಿಪ್ರಾಯಪಟ್ಟರು.

ಖಾಸಗಿ ಹೋಟೆಲ್​ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಫೋರಂನ ಕಲ್ಯಾಣ ಕರ್ನಾಟಕ ಚಾಪ್ಟರ್​ ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಲಬರಗಿ ಪ್ರವಾಸೋದ್ಯಮಿಗಳ ಮತ್ತು ಪಾಲುದಾರರ ಸಭೆ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮ ರಂಗದಲ್ಲಿ ಕಲಬುರಗಿ ಕೋಟೆ, ಶರಣಬಸವೇಶ್ವರ ದೇಗುಲ, ಖಾಜಾ ಬಂದೇ ನವಾಜ್​ ದರ್ಗಾ, ದೇವಲಗಾಣಗಾಪುರ, ಮಳಖೇಡ, ಸನ್ನತಿ ಸೇರಿ ಹಲವು ದೇಗುಲ ಹಾಗೂ ಶಿಲ್ಪಕಲಾ ವೈಭವದ ವೈಶಿಷ್ಠತೆಯ ಅನೇಕ ತಾಣಗಳಿದ್ದರೂ ಪ್ರವಾಸಿಗರನ್ನು ಸೆಳೆಯಲು ಹಿಂದೆ ಬಿದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋಟೆಲ್​, ವಸತಿಗೃಹಗಳಿಗೆ ಪರವಾನಗಿ ಸರಳೀಕರಣ, ವ್ಯವಹಾರದ ಮೇಲೆ ವಿಧಿಸುವ ಕಠಿಣ ನಿಯಮಗಳ ಸಡಿಲಿಕೆ, ಮನರಂಜನಾ ಪ್ರದರ್ಶನದ ವೇಳೆ ಅವಧಿ ವಿಸ್ತರಣೆ ಜತೆಗೆ ಪಾಲುದಾರ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದ್ದಲ್ಲಿ ಪ್ರವಾಸೋದ್ಯಮ ೇತ್ರದಲ್ಲಿ ಪ್ರ ಪ್ರಗತಿ ಹೊಂದಲು ಸಾಧ್ಯ. ಉದ್ಯೋಗ ಸೃಷ್ಟಿ ಜತೆಗೆ ವ್ಯವಹಾರ ಪ್ರಗತಿಯೊಂದಿಗೆ ಈ ಭಾಗದ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.

ಕರ್ನಾಟಕ ಟೂರಿಸಂ ಫೋರಂ ಅಧ್ಯಕ್ಷ ಪ್ಯಾಟ್ರಿಕ್​ ಜಾರ್ಜ್​ ಮಾತನಾಡಿ, ದೇಗುಲ, ಕಲಾ, ಸಾಂಸ್ಕೃತಿಕ, ಆಹಾರ ಹಾಗೂ ವೆಲ್​ನೆಸ್​ ಟೂರಿಸಂ ಮೂಲಕ ಈ ಭಾಗದ ಸ್ಥಳಿಯ ಮಹತ್ವಗಳಿಗೆ ಪ್ರವಾಸೋದ್ಯಮದ ಸ್ಪರ್ಷ ನೀಡಿ ಅಭಿವೃದ್ಧಿ ಹೊಂದುವಂತೆ ಮಾಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಯೋಜನೆ ಸಿದ್ಧಪಡಿಸಲು ಸಲಹೆ ನೀಡಲಾಗುತ್ತಿದೆ. ಮೈಸೂರು, ಕರಾವಳಿ, ಹಂಪಿ, ಬಾದಾಮಿ ಇತರ ಕಡೆಗಳಲ್ಲಿ ಪ್ರವಾಸೋದ್ಯಮ ಬೆಳೆದಂತೆ ಈ ಭಾಗಕ್ಕೂ ನೂತನ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಮೊದಲ ಬಾರಿಗೆ ಕಲಬುರಗಿಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಣಿಕ ಪ್ರವಾಸ ಹಮ್ಮಿಕೊಂಡಿರುವುದು ದಾಖಲೆ ಎಂದರು.

ಕಲ್ಯಾಣ ಕರ್ನಾಟಕ ಚಾಪ್ಟರ್​ ಸಂಯೋಜಕ ಸಂದೀಪ್​ರಾಜ್​ ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಪ್ರವಾಸಿ ರಂಗದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮವೇ ಬೆನ್ನೆಲುಬು. ಇದರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಡಾ.ಸದಾನಂದ ಪೆರ್ಲ, ವಿನಯ್​, ವಿನುತ್​, ರವೀಂದ್ರ, ನಾಗರಾಜ ಸುಳೆಗಾರ, ಅಭಿಷೇಕ ಬೀದರ್​, ಸೈಯದ್​ ಅಬ್ದುಲ್​ ರೌಫ್​ ಖಾದ್ರಿ, ಮಹೇಶ ಕಡೇಚೂರ್​ ಇತರರಿದ್ದರು.

ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾದರೆ ಈ ಭಾಗದ ನಿರುದ್ಯೋಗ ಸಮಸ್ಯೆ ಕೊನೆಗೊಂಡು ವಲಸೆ ಹೋಗುವುದು ತಪ್ಪಿಸಬಹುದು. ಕಲಬುರಗಿ ಕೇಂದ್ರೀಕರಿಸಿ ಹೆಲಿ ಟೂರಿಸಂ ಆರಂಭಕ್ಕೆ ಉತ್ತಮ ಅವಕಾಶವಿದೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅನುಷ್ಠಾನಗೊಳ್ಳಬೇಕು.
> ಡಾ.ಸದಾನಂದ ಪೆರ್ಲ, ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ, ಆಕಾಶವಾಣಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net