ಅಕ್ರಮ ಮರಳು ದೂರು ನೀಡಿದ್ದಕ್ಕೆ ಬೆದರಿಕೆ

illegal sand mining
illegal sand mining
Published on

ಪ್ರಮುಖ ಮುಖ್ಯಾಂಶಗಳು

  • ಅರುಣ ಭರಣಿ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಅಕ್ರಮ ಮರಳುಗಾರಿಕೆ ದೂರು ನೀಡಿದ್ದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಮೇಲೆ ಹಲ್ಲೆ ಮಾಡಿ, ಬೆದರಿಕೆ ಒಡ್ಡಲಾಗಿದೆ ಎಂದು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಣ ಭರಣಿ ಮತ್ತು ಸಂಗಡಿಗರು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಕೇಸ್​ ಮಾಡಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿಯೂ ಶಹಾಬಾದ್​ ತಾಲೂಕಿನ ಕಡೆಹಳ್ಳಿಯಲ್ಲಿ ನಿರ್ಮಿಸುತ್ತಿರುವ ಭೀಮಾ ಬ್ಯಾರೇಜ್​ ಬಳಿ ಹಡಗುಗಳ ಮೂಲಕ ಅಕ್ರಮ ಮರಳು ತೆಗೆದು, ಸಾಗಿಸಲಾಗುತ್ತಿದ್ದು, ಇದನ್ನು ತಡೆಯಿರಿ ಎಂದು ಶಹಾಬಾದ್​ ತಹಸೀಲ್ದಾರ್​ಗೆ ದೂರು ನೀಡಿದ್ದರು. ದೂರು ಆಧರಿಸಿ ತಹಸೀಲ್ದಾರ್​ ಸ್ಥಳ ಪರಿಶೀಲಿಸಿದ್ದರು. ಇದನ್ನು ತಿಳಿದು ಅರುಣ ಭರಣಿಯೂ ಆನಂದನನ್ನು ನಗರದ ಹೊಟೇಲ್​ಒಂದಕ್ಕೆ ಕರೆಸಿ, ಗುಂಡಾಗಳ ಜತೆಗೆ ಕೂಡಿ ಎಳೆದಾಡಿ, ಹಲ್ಲೆ ಮಾಡಿದ್ದಲ್ಲದೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದು, ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net