ಅಭಿವೃದ್ಧಿಯಲ್ಲಿ ಅಭಿಯಂತರ ಪಾತ್ರ ಪ್ರಮುಖ

ಕಲಬುರಗಿಯಲ್ಲಿ ಶನಿವಾರ ನಡೆದ ಸಿವಿಲ್​ ಇಂಜಿನಿಯರ್ಸ್​ ಅಸೋಸಿಯೇಷನ್​ ರಜತೋತ್ಸವದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ, ಜಿತೇಂದ್ರ ಮಿಶ್ರಾ, ಅನಿಲಕುಮಾರ ಗಂಗಾಣೆ, ಸಂತೋಷ ಮುಂದಡಾ, ಮುರಳೀಧರ ಕರಲಗಿಕರ್​ ಇತರರಿದ್ದರು.
ಕಲಬುರಗಿಯಲ್ಲಿ ಶನಿವಾರ ನಡೆದ ಸಿವಿಲ್​ ಇಂಜಿನಿಯರ್ಸ್​ ಅಸೋಸಿಯೇಷನ್​ ರಜತೋತ್ಸವದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ, ಜಿತೇಂದ್ರ ಮಿಶ್ರಾ, ಅನಿಲಕುಮಾರ ಗಂಗಾಣೆ, ಸಂತೋಷ ಮುಂದಡಾ, ಮುರಳೀಧರ ಕರಲಗಿಕರ್​ ಇತರರಿದ್ದರು.
Published on
Summary

ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ ಶ್ಲಾಘನೆ

ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಸಂಘದ ರಜತೋತ್ಸವ

ಕಲಬುರಗಿ: ದೇಶದ ಅಭಿವೃದ್ಧಿಗೆ ಇಂಜಿನಿಯರ್ಸ್​ ಕೊಡುಗೆ ಅಪಾರ. ಇಂಜಿನಿಯರ್​ಗಳು ಉತ್ತಮ ಕೆಲಸ ಮಾಡುತ್ತಿರುವುದರಿಂದಲೇ ನವಭಾರತ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ ಎಂದು ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ನಗರದ ಎಂಆರ್​ಎಂಸಿ ಸ್ಯಾಕ್​ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಸಂಘದ ರಜತ ಮಹೋತ್ಸವ ಮತ್ತು ಇಂಜಿನಿಯರ್ಸ್​ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕಂಡ ಶ್ರೇಷ್ಠ ಇಂಜಿನಿಯರ್​ ಸರ್​ ಎಂ.ವಿಶ್ವೇಶ್ವರಯ್ಯನವರ ಆದರ್ಶ, ಮೌಲ್ಯ, ಪ್ರಾಮಾಣಿಕತೆ, ಜನಪರ ಕಾಳಜಿ ನಮಗೆ ದಾರಿದೀಪವಾಗಿದೆ. ಈ ತಲೆಮಾರಿನ ಇಂಜಿನಿಯರ್​ಗಳು ಸಹ ವಿಶ್ವೇಶ್ವರಯ್ಯನವರಷ್ಟೇ ದ, ಬುದ್ಧಿವಂತರಾಗಿದ್ದಾರೆ ಎಂದು ಕೊಂಡಾಡಿದರು.

ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಮಾತನಾಡಿ, ರೈಲ್ವೆ, ಹೆದ್ದಾರಿ ಸೇರಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇಂಜಿನಿಯರ್​ಗಳ ಕೊಡುಗೆ ಅಪ್ರತಿಮವಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಸುಭಾಷ ಶಿಣಕರ್​, ಕರ್ನಾಟಕ ವೃತ್ತಿಪರ ಸಿವಿಲ್​ ಇಂಜಿನಿಯರ್​ಗಳ ಪರಿಷತ್​ ಅಧ್ಯ ಶ್ರೀಕಾಂತ ಚನ್ನಾಳ, ಸದಸ್ಯ ಮುರಳೀಧರ ಜಿ.ಕರಲಗಿಕರ್​, ಕೆಪಿಸಿಇಎ ಕಾರ್ಯದರ್ಶಿ ಸಿದ್ರಾಮ ನಿರೋಣಿ ಮಾತನಾಡಿದರು.

ಸಂದ ಅಧ್ಯ ಜಿತೇಂದ್ರ ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅನಿಲಕುಮಾರ ಗಂಗಾಣೆ, ಕಾರ್ಯದರ್ಶಿ ಮನೀಶ ವೈಕುಂಠ, ಜಾಲ್ನಾದ ರಾಜುರಿ ಸ್ಟೀಲ್​ ನಿರ್ದೇಶಕ ಸಂತೋಷ ಮುಂದಡಾ, ವಿಜಯಕುಮಾರ ಮೇಳಕುಂದಿ, ಜಗನ್ನಾಥ ಜೋಶಿ, ವಿಜಯೀಂದ್ರ ಕಲ್ಲೂರ, ಸಮೀರ್​ ದೇಶಪಾಂಡೆ, ನರಸಿಂಹಲು ಪತ್ತಿ, ದಶರಥ ಅಕ್ಕಾ, ಲಿಂಗರಾಜ ವಾಲಿ, ಅಮರ ಹಿರೋಜಿಕರ್​, ವಿನಯ ಪಾಟೀಲ್​, ಶ್ರೀಶೈಲ ದೇವಣಿ, ಶರದ ಚೌಕಾ, ನಿಖಿಲರೆಡ್ಡಿ ಶೇರಿಕಾರ, ಅನಿಲ ಮಂಗಲಗಿ, ಅನಿಲ ನಾಗನಹಳ್ಳಿ, ನಿಜಗುಣಿ ದೇವಣಗಾಂವ, ಅಬ್ದುಲ್ಲಾ ಬೇಲಿಫ್​, ಆಬೀದ್​ ಹುಸೇನ್​ ಪಟೇಲ್​, ಇಫ್ತೇಕಾರ್​ ಹುಸೇನ್​, ಸುಮಿತ ಬಳಬಟ್ಟಿ, ರವಿಕಾಂತ ಬಾಸೂತಕರ್​, ಬಂಡೇಶರೆಡ್ಡಿ, ವಿಶ್ವನಾಥ ಗುಬ್ಬೇವಾಡ, ಜಯಕುಮಾರ ಮಾಡಗಿ, ರಮೇಶ ಮಹಾದಾಪ್​, ಶ್ರೀನಿವಾಸ ಬೋರಾಳಕರ್​, ರಾಜುರಿ ಸ್ಟೀಲ್​ ಮಾರುಕಟ್ಟೆ ಅಧಿಕಾರಿ ಸಂದೀಪ್​ ಇತರರಿದ್ದರು.

ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಇಂಜಿನಿಯರ್​ಗಳ ಪ್ರತಿಭಾವಂತ ಮಕ್ಕಳು, ಸೆಂಟ್ರಿಂಗ್​ ಇತರ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ನೀರಾವರಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್​ ವಿಜಯ ಸಂಗನ್​, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್​ ರಫಿಯುದ್ದಿನ್​ ಅವರನ್ನು ಸತ್ಕರಿಸಲಾಯಿತು.

ಕಲಬುರಗಿ ಸಿವಿಲ್​ ಇಂಜಿನಿಯರ್​ಗಳ ಸಂಘದ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡುವುದರ ಜತೆಗೆ ರಾಜ್ಯ ಸರ್ಕಾರದಿಂದಲೂ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್​ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net