ಕಲಬುರಗಿ: ನಗರದಲ್ಲಿ ಸ್ಫರ್ಧಾತ್ಮಕ ಪರೀಕ್ಷೆ ಎದುರಿಸಲಿರುವ ಅಭ್ಯರ್ಥಿಗಳಿಗಾಗಿ ನಿರ್ಮಿಸಿರುವ ಪ್ರಬುದ್ಧ ಅಕಾಡೆಮಿಯ ಚಾವಣಿ ಕುಸಿದಿರುವ ಘಟನೆ ಮಾಸಿರುವ ಮಧ್ಯೆಯೇ ಇದೀಗ ಲಕ್ಷಾಂತರ ರೂ. ವೆಚ್ಚದ ಪಾರ್ಕಿಂಗ್ ಶೆಡ್ ಧರೆಗುರುಳಿದೆ.
ಲ್ಯಾಂಡ್ ಆರ್ಮಿಯಿಂದ ನಿರ್ಮಿಸಿರುವ ಶೆಡ್ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಧರೆಗುರುಳಿದ್ದು, ಕಳಪೆ ಕಾಮಗಾರಿಗೆ ಮತ್ತೊಂದು ಸಾಕ್ಷಿ ಇದು ಎಂದು ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಆರೋಪಿಸಿದ್ದಾರೆ.
ಅದೃಷ್ಟವಶಾತ್ ಶೆಡ್ ಕೆಳಗೆ ವಿದ್ಯಾರ್ಥಿಗಳು, ವಾಹನಗಳು ಇಲ್ಲದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. 30 ಕೋಟಿಯ ಇಡೀ ಕಟ್ಟಡ ಕಳಪೆಯಾಗಿದ್ದು, ಪುನಃ ಪರಿಶೀಲನೆ ನಡೆಸಿ, ಗುಣಾತ್ಮಕ ಪರೀಕ್ಷೆ ನಡೆಸಿ, ಕೋಚಿಂಗ್ ಆರಂಭಿಸಬೇಕು ಎಂದು ಆಗ್ರಹಿಸಿದರು.
ಜನೇವರಿಯಲ್ಲಿ ಉದ್ಘಾಟನೆಗೊಂಡ ಪ್ರಬುದ್ಧ ಅಕಾಡೆಮಿಯ ಕಟ್ಟಡದ ಛಾವಣಿ ಒಂದು ತಿಂಗಳೊಳಗೆ ಉದುರಿ ಬಿದ್ದಿತ್ತು. ಆಗ ಕೆಆರ್ ಡಿಐಲ್ ನ ಎಇಇ ಸೌರಭ ಭೀಮನ್ ಅಮಾನತು ಮಾಡಲಾಗಿತ್ತು. ಇದೀಗ ಶೆಡ್ ಉರುಳಿ ಬಿದ್ದಿದ್ದು, ಇಡೀ ಕಾಮಗಾರಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ.