ಮೇ 10ರಂದು ಮಧ್ಯಾಹ್ನ ಪ್ರಕಾಶನೂ ತಾಂಡಾದ ಸಚಿನ ರಾಠೋಡ್ ಜತೆಗೆ ಜಗಳವಾಡಿದ್ದು, ಸ್ಥಳಿಯರು ಬಿಡಿಸಿ ಕಳುಹಿಸಿದ್ದಾರೆ. ಕೆಲಸ ಮುಗಿಸಿ ಪ್ರಕಾಶ ಮಧ್ಯರಾತ್ರಿ 1ಗಂಟೆಗೆ ಮನೆಗೆ ಬಂದಿದ್ದು, ಕೆಲ ಹೊತ್ತಿನ ನಂತರ ಪುನ@ ಹೊರ ಹೋಗಿದ್ದಾನೆ. ಮನೆಯವರು ಮಲಗಿದ್ದು, ಗುರುವಾರ ಬೆಳಗ್ಗೆ 6ಗಂಟೆಗೆ ನೋಡಿದಾಗ ಪ್ರಕಾಶನ ದೇಹ ಅಂಗಳದಲ್ಲಿ ಬಿದ್ದಿದ್ದು, ಕಂಡು ಬಂದಿದೆ. ದೇಹದ ಮೇಲೆ ಗಾಯಗಳಾಗಿದ್ದು, ಕಂಡು ಬಂದಿವೆ. ಜಗಳ ತೆಗೆದಿದ್ದ ಸಚಿನ ರಾಠೋಡ್ ಹಾಗೂ ಆತನ ಸಹಚರರು ಕೂಡಿ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಅನಸೂಯಾಬಾಯಿ ದೂರಿನಂತೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.