ಕಲಬುರಗಿ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕನನ್ನು ಕಬ್ಬಿಣದ ರಾಡ್, ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಟನೆ ನಗರದ ರಾಮ ಮಂದಿರದ ಬಳಿ ಭಾನುವಾರ ನಡೆದಿದೆ.
ಮೂಲತ@ ಆಳಂದ ತಾಲೂಕಿನ ಹಡಲಗಿ ಗ್ರಾಮದ, ಪ್ರಸ್ತುತ ನಗರದ ರಾಣೇಶ ಪೀರ್ ದರ್ಗಾದ ಬಳಿ ನಿವಾಸಿ ರವಿಚಂದ್ರ ಖೇಡ (45) ಕೊಲೆಯಾದವ. ಶಹಾಬಾದ್ ಹತ್ತಿರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಶನಿವಾರ ರಾತ್ರಿ ಬೇರೆ ಕಡೆ ಹೆಚ್ಚುವರಿ ಕೆಲಸವಿದೆ ಎಂದು ಮನೆಯಿಂದ ಹೊರ ಬಂದಿದ್ದು, ಭಾನುವಾರ ಬೆಳಗ್ಗೆ ಕೊಲೆಯಾದ ಮಾಹಿತಿ ತಿಳಿದು ಬಂದಿದೆ. ಖಾಸಗಿ ಸ್ಥಳದಲ್ಲಿ ದುಷ್ಕರ್ಮಿಗಳು ರವಿಚಂದ್ರ ಅವರ ತಲೆಗೆ ಕಬ್ಬಿಣದ ರಾಡ್ನಿಂದ ಬಲವಾಗಿ ಜಜ್ಜಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಶಾಲೂ, ಎಸಿಪಿ ಶರಣಪ್ಪ ಸುಬೇದಾರ, ಪಿಐ ಗುರುಲಿಂಗಪ್ಪಗೌಡ ಪಾಟೀಲ್ ಸೇರಿ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತರಿಂದಲೇ ಕೊಲೆ?: ರವಿಚಂದ್ರನ್ ಸ್ನೇಹಿತರೇ ಕೊಲೆ ಮಾಡಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೈನ್ಯದಿಂದ ಬಂದಿದ್ದ ರವಿಚಂದ್ರನ್: ನಾಲ್ಕು ವರ್ಷದ ಹಿಂದೆ ಬಿಎಸ್ಎ್ ಕರ್ತವ್ಯದಿಂದ ಮುಕ್ತರಾಗಿ ಕಲಬುರಗಿಗೆ ಆಗಮಿಸಿ, ನಗರದಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದರು. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ವಿವಾದಿತ ಸ್ಥಳದಲ್ಲಿ ಕೊಲೆ ನಡೆದಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ. ಕೊಲೆ ಸ್ಥಳದಲ್ಲಿ ರವಿಚಂದ್ರನ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.