ಸುಪ್ರೀಂಕೋರ್ಟ್​ ಅದಾಲತ್​ ಆ.21ರಿಂದ

Supreme Court Adalat
Supreme Court Adalat
Published on
ಕಲಬುರಗಿ: ಸವೋರ್ಚ್ಚ ನ್ಯಾಯಾಲಯ "ಸಮಾದಾನ ಸಮಾರೋಹ' ವಿಶೇಷ ಲೋಕ ಅದಾಲತ್​ನ್ನು ಆ.21, 22 ಮತ್ತು 23ರಂದು ಹಮ್ಮಿಕೊಂಡಿದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ತಿಳಿಸಿದರು.
ಸುಪ್ರೀಂ ಕೋರ್ಟ್​ನಲ್ಲಿ ಕಲಬುರಗಿ ಜಿಲ್ಲೆಯ ಬಾಕಿ ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಅವಕಾಶವಿದೆ. ಪಕ್ಷಗಾರರು ನವದೆಹಲಿಗೆ ಹೋಗದೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ, ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಹಾಜರಾಗಿ ರಾಜಿ ಸಂಧಾನ ಮಾಡಿಕೊಂಡು, ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ಜಿಲ್ಲೆಯಿಂದ 200 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಸುಪ್ರೀಂ ಕೋರ್ಟ್​ ಗುರುತಿಸಿದೆ. 200 ಪ್ರಕರಣದ ಪಕ್ಷಗಾರರಿಗೆ ಈಗಾಗಲೇ ನೋಟಿಸ್​ ನೀಡಲಾಗಿದೆ. ಜುಲೈ 30ರೊಳಗೆ ಉಭಯ ಪಕ್ಷಗಾರರು ನಿಗದಿತ ದಿನಾಂಕದಂದು ಕಾನೂ ಸೇವೆಗಳ ಪ್ರಾಧಿಕಾರದ ಕಚೇರಿಗೆ ಆಗಮಿಸಿ, ರಾಜೀ ಸಂಧಾನದ ಒಪ್ಪಂದಕ್ಕೆ ಒಪ್ಪಿಗೆ ನೀಡಬೇಕು ಎಂದು ತಿಳಿಸಿದರು.
ರಾಜಿ ಸಂಧಾನದಲ್ಲಿ ಭಾಗವಹಿಸಲು ವಿಡಿಯೋ ಕಾನ್ಫರೆನ್ಸ್​ ಸೌಲಭ್ಯವೂ ಇದೆ. ಜಿಲ್ಲೆಯಲ್ಲಿ ಇತ್ಯರ್ಥ ಪ್ರಕರಣಗಳನ್ನು ಸವೋರ್ಚ್ಛ ನ್ಯಾಯಾಲಯದಲ್ಲಿ ಆ.21, 22, 23ರಂದು ಅದಾಲತ್​ನಲ್ಲಿ ಮತ್ತೊಮ್ಮೆ ಪಕ್ಷಗಾರರ ಒಪ್ಪಿಗೆಯನ್ನು ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ಸಮಕ್ಷಮದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಿ, ಪ್ರಕರಣ ಪೂರ್ಣಗೊಳಿಸಲಾಗುವುದು ಎಂದರು.
ವಿಶೇಷ ಅದಾಲತ್​ನಲ್ಲಿ ಬ್ಯಾಂಕಿಂಗ್​, ನಾಗರಿಕ ಕಾನೂನು, ಪರಿಹಾರ ಪ್ರಕರಣಗಳು, ಗ್ರಾಹಕ ವ್ಯಾಜ್ಯಗಳು ಮತ್ತು ರೇರಾ, ಕ್ರಿಮಿನಲ್​, ಕೌಟುಂಬಿಕ ವಿವಾದಗಳು, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು, ಭೂಸ್ವಾಧಿನ, ಆಸ್ತಿ ತೆರಿಗೆ ಹಾಗೂ ಬಾಡಿಗೆ ನಿಯಂತ್ರಣಕ್ಕೆ ಸಂಬಂಧಿಸಿದ 12 ಪ್ರಮುಖ ವಿಭಾಗಗಳ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದರು.
ಪಕ್ಷಗಾರರಿಗೆ ನೋಟಿಸ್​ ಜಾರಿಯಾದ ನಂತರ, ಸ್ಥಳಿಯ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಭೌತಿಕವಾಗಿ ಅಥವಾ ವರ್ಚುವಲ್​ ವಿಧಾನದಲ್ಲಿ ಪೂರ್ವ ಸಮಾಧಾನ ಸಭೆಗಳು ನಡೆಯಲಿವೆ. ಒಂದು ವೇಳೆ ಪಕ್ಷಗಾರರು ಬೇರೆ ರಾಜ್ಯಗಳಲ್ಲಿದ್ದರೆ, ಅವರ ವಿನಂತಿಯ ಮೇರೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ವಕೀಲರು ಮತ್ತು ಸಾರ್ವಜನಿಕರು ಈ ಅದಾಲತ್ನ ಪ್ರಯೋಜನ ಪಡೆಯಲು ಸುಪ್ರೀಂ ಕೋಟ್ರ್ನ ಅಧಿಕೃತ ವೆಬ್​ಸೈಟ್​ ಜಠಿಠಿಟಠ://್ಛಟ್ಟಞಠ.ಜ್ಝಛಿ/್ಜಟ್ಡಿಛ್ಛಿಟಿಊ4ಆಇಗ್ಢ್ಠಟಕ6 ನಲ್ಲಿ ಲಭ್ಯವಿರುವ ಗೂಗಲ್​ ಫಾಮ್​ರ್ ಲಿಂಕ್​ ಮೂಲಕ ವಿನಂತಿ ಸಲ್ಲಿಸಬಹುದು. ನ್ಯಾಯಾಲಯದ ಅಲೆದಾಟವಿಲ್ಲದೆ, ಉಚಿತವಾಗಿ ಹಾಗೂ ಸೌಹಾರ್ದಯುತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮನವಿ ಮಾಡಿದರು.
ನೇರ ಭಾಗವಹಿಸಲು ಅವಕಾಶ
ಕಲಬುರಗಿ ಜಿಲ್ಲೆಯಲ್ಲಿ ಸುಪ್ರೀಂಕೋರ್ಟ್​ 200 ಪ್ರಕರಣಗಳನ್ನು ರಾಜಿ, ಸಂಧಾನಕ್ಕೆ ಗುರುತಿಸಿದೆ. ಇದನ್ನು ಹೊರತಪಡಿಸಿ ಬೇರೆ ಪ್ರಕರಣಗಳ ಪಕ್ಷಗಾರರು ನಮ್ಮ ಪ್ರಕರಣವೂ ರಾಜೀ ಸಂಧಾನಕ್ಕೆ ಪರಿಗಣಿಸಿ ಎಂದು ಮನವಿ ಮಾಡಿದರೆ, ಅವರಿಗೂ ಅವಕಾಶವಿದೆ. ಆದರೆ ಜುಲೈ 30ಕ್ಕೆ ಮುನ್ನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಮನವಿ ಸಲ್ಲಿಸಿದರೆ ಲೋಕ ಅದಾಲತ್​ನಲ್ಲಿ ಭಾಗವಹಿಸಬಹುದು ಎಂದು ನ್ಯಾಯಾಧೀಶ ಶ್ರೀನಿವಾಸ ನವಲೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net