ಶ್ರದ್ಧೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ಮಳಖೇಡ ಸಮೀಪದ ತೊಟ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅರಿವಿನ ಅಂಗಳ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಸಂತೋಷ ತೊಟ್ನಳ್ಳಿ, ಗಾಯತ್ರಿದೇವಿ ಇತರರಿದ್ದರು.
ಮಳಖೇಡ ಸಮೀಪದ ತೊಟ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅರಿವಿನ ಅಂಗಳ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಸಂತೋಷ ತೊಟ್ನಳ್ಳಿ, ಗಾಯತ್ರಿದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ತೊಟ್ನಳ್ಳಿ ಶಿವಾಚಾರ್ಯ ನುಡಿ
  • ಅರಿವಿನ ಅಂಗಳ ಕೃತಿ ಲೋಕಾರ್ಪಣೆ
ಮಳಖೇಡ: ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ತೊಟ್ನಳ್ಳಿ ಮಹಾಂತೇಶ್ವರ ಮಠದ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ ನುಡಿದರು.
ತೊಟ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅರಿವಿನ ಕೃತಿ ಲೋಕಾರ್ಪಣೆ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗುಣಮಟ್ಟದ ಶಿಕ್ಷಣ ಜತೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವಿದೆ. ಪಾಠದೊಂದಿಗೆ ಆಟವಿದ್ದಾಗ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಅವರ ಮನಸ್ಥಿತಿ ಅರಿತು ಇಚ್ಛೆಗನುಗುಣ ಶಿಕ್ಷಣ ನೀಡಿದಾಗಲೇ ಮುಂದೊಂದು ದಿನ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸತ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅವರು ಶಾಲೆ ಮಕ್ಕಳು ರಚಿಸಿದ, ಗುರುಪಾದ ಡಬರಿ ಸಂಪಾದಕತ್ವದ ಅರಿವಿನ ಅಂಗಳ ಕೃತಿ ಲೋಕಾರ್ಪಣೆ ಮಾಡಿದರು. ಪ್ರಮುಖರಾದ ನಾಗಯ್ಯ ಸ್ವಾಮಿ ಬೊಮ್ನಳ್ಳಿ, ಸಂತೋಷ ತೊಟ್ನಳ್ಳಿ, ಸಿದ್ಧಲಿಂಗಯ್ಯ ಕೋಡಗಿಮಠ, ಶರಣಯ್ಯ ಸ್ವಾಮಿ, ಶರಣಪ್ಪ ಎಳ್ಳಿ, ಶಂಕರ ಗುಗ್ಗರಿ, ಸುರೇಶ ಬಿಜನಳ್ಳಿ, ಶಿಕ್ಷಕಿಯರಾದ ಜಗದೇವಿ, ಪದ್ಮಾವತಿ, ಸುಮಂಗಲಾ, ಮರೆಮ್ಮ ಇತರರಿದ್ದರು. ಮುಖ್ಯಗುರು ಗಾಯತ್ರಿದೇವಿ ಬೊಮ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಿದ್ದಣ್ಣ ವಾಡೇದ ನಿರೂಪಣೆ ಮಾಡಿದರು. ಶಿಕ್ಷಕ ಶಿವಕುಮಾರ ಬಿಡಪ ಸ್ವಾಗತಿಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net