ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ

ಅಫಜಲಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಶಾಸಕ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಸಿದ್ಧಾರ್ಥ ಬಸರಿಗಿಡ ಇತರರಿದ್ದರು.
ಅಫಜಲಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಶಾಸಕ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಸಿದ್ಧಾರ್ಥ ಬಸರಿಗಿಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್ ಹೇಳಿಕೆ
  • ಅಫಜಲಪುರದಲ್ಲಿ ಸ್ವಾಗತ ಸಮಾರಂಭ
ಅಫಜಲಪುರ: ವಿದ್ಯಾರ್ಥಿ ಜೀವನದಲ್ಲಿ ಪದವಿ ಹಂತವು ಮಹತ್ವವಾಗಿದ್ದು, ಸತತ ಅಧ್ಯಯನದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಉನ್ನತ ಶಿP್ಷÀಣಕ್ಕಾಗಿ ಸರ್ಕಾರ ಶ್ರಮಿಸುತ್ತಿದ್ದೆ. ಸಾಕಷ್ಟು ಹಣ ವ್ಯಯಿಸಿ ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪೀಠೋಪಕರಣ, ಗಣಕಯಂತ್ರಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯP್ಷÀ ಪ್ರಕಾಶ ಜಮಾದಾರ ಮಾತನಾ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳು ಬರುತ್ತಿದ್ದು, ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಸಾಧಕ ಅಧಿಕಾರಿಗಳನ್ನು ರೋಲ್ ಮಾಡೆಲ್ ಆಗಿಟ್ಟಕೊಂಡು, ಅವರಂತೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಪಂ ಮಾಜಿ ಉಪಾಧ್ಯP್ಷÀ ಶಿವಾನಂದ ಗಾಡಿಸಾಹುಕಾರ, ಜಿಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡ, ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ರಮೇಶ ಪೂಜಾರಿ, ಪ್ರಮುಖರಾದ ಮಾಜಿದ್ ಪಟೇಲ್, ಸಂತೋಷ ಹುಗ್ಗಿ, ಡಾ.ಎಂ.ಎಸ್.ರಾಜೇಶ್ವರಿ, ಡಾ.ಸಾವಿತ್ರಿ ಕೃಷ್ಣ, ಸೂರ್ಯಕಾಂತ ಉಮ್ಮಾಪುರ, ಶಾಂತಲಾ, ಮಹಮ್ಮದ್ ಯುನೂಸ್, ಪ್ರವೀಣ, ವಿನಾಯಕ ಜಿ.ಕೆ., ರಾಘವೇಂದ್ರ, ಮಂಜುನಾಥ, ಹೀರು ರಾಠೋಡ್, ಡಾ.ಸಂಗಣ್ಣ ಸಿಂಗೆ ಇತರರಿದ್ದರು.
"

ಶಿP್ಷÀಣದ ಜತೆಗೆ ಮಾನವೀಯ ಮೌಲ್ಯ ಅವಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಸಂಸ್ಕಾರವೂ ಮುಖ್ಯವಾಗಿದ್ದು, ಗುರು-ಹಿರಿಯರನ್ನು ಗೌರವಿಸಬೇಕು. ದುಶ್ಚಟಗಳಿಂದ ದೂರವಿದ್ದು, ಮಾದರಿ ಜೀವನ ನಡೆಸಬೇಕು. ಉತ್ತಮ ಆರೋಗ್ಯ, ಸದೃಢ ದೇಹಕ್ಕಾಗಿ ನಿತ್ಯ ಯೋಗ, ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಬೇಕು. 

| ಎಂ.ವೈ.ಪಾಟೀಲ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net