ಕಳವಾಗಿದ್ದ ಗ್ಯಾಸ್​ ಸಿಲೆಂಡರ್​ ಜಪ್ತಿ: ಇಬ್ಬರ ಬಂಧನ

theives arrest
theives arrest
Published on
ಕಲಬುರಗಿ: ಕಳ್ಳತನ ಮಾಡಿದ್ದ ತುಂಬಿದ ಮತ್ತು ಖಾಲಿ ಗ್ಯಾಸ್​ ಸಿಲಿಂಡರ್​ಗಳನ್ನು ಪತ್ತೆ ಮಾಡಿರುವ ಆಳಂದ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು ಗ್ಯಾಸ್​ ೧೦ ಸಿಲಿಂಡರ್​ ಜಪ್ತಿ ಮಾಡಿದ್ದಾರೆ. ಆಳಂದ ತಾಲೂಕಿನ ಖಜೂರಿ ಗ್ರಾಮದ ಪ್ರದಿಪ ಕೋರೆ, ಪ್ರಶಾಂತ ಕೋರೆ ಬಂಧಿತ ಆರೋಪಿಗಳು.
ಜು.೩ರಂದು ಖಜೂರಿ ಗ್ರಾಮದ ಕೋರಣೇಶ್ವರ ಗ್ಯಾಸ್​ ಏಜೆನ್ಸಿ ಎದುರು ಪಿಕಪ್​ ವಾಹನದಲ್ಲಿದ್ದ ಐದು ತುಂಬಿದ, ಐದು ಖಾಲಿ ಗ್ಯಾಸ್​ ಸಿಲಿಂಡರ್​ ಕಳ್ಳತನ ಮಾಡಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಅಪರಾಧಿಗಳನ್ನು ಬಂಧಿಸಿ, ೨೭ ಸಾವಿರ ರೂ. ಮೌಲ್ಯದ ಐದು ತುಂಬಿದ ಗ್ಯಾಸ್​ ಸಿಲಿಂಡರ್​, ಐದು ಖಾಲಿ ಗ್ಯಾಸ್​ ಸಿಲಿಂಡರ್​ ಜಪ್ತಿ ಮಾಡಿದ್ದಾರೆ. ಡಿವೈಎಸ್​ಪಿ ತಮ್ಮರಾಯ ಪಾಟೀಲ್​ ಮರ‍್ಗರ‍್ಶನದಲ್ಲಿ ಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಪಿಎಸ್​ಐ ಭನ್ನಪ್ಪ, ಸಿಬ್ಬಂದಿ ಮೈಹಿಬೂಬ್​ ಶೇಖ, ಚಂದ್ರಶೇಖರ, ಜಾಕೀರ, ಸಚಿನ, ಸಿದ್ದರಾಮ, ಶಿವಲಿಂಗ, ಮೌಲಾಲಿ, ಮಹಾಂತೇಶ ತಂಡ ಕರ‍್ಯಾಚರಣೆ ನಡೆಸಿದ್ದು, ಎಸ್​ಪಿ ಅಡ್ಡೂರು ಶ್ರೀನಿವಾಸುಲು ಶ್ಲಾಘಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net