ಲಿಂಗರಾಜ ಅಪ್ಪ ಕಾಲೇಜಿಗೆ ವೀರಾಗ್ರಣಿ: ಶರಣಬಸವ ವಿವಿ ಜ್ನಾನೋತ್ಸವ ಸಮಾರೋಪ

sharanabasava univercity
sharanabasava univercity
Published on

ಪ್ರಮುಖ ಮುಖ್ಯಾಂಶಗಳು

  • ಶರಣಬಸವ ವಿವಿ ಜ್ಞಾನೋತ್ಸವ, ತಾಂತ್ರಿಕ, ಸಾಂಸತಿಕ ಉತ್ಸವಕ್ಕೆ ಸಂಭ್ರಮದ ತೆರೆ
ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಜ್ಞಾನೋತ್ಸವ-&2026 ಟೆಕ್ನೋ ಕಲ್ಚರಲ್​ ಉತ್ಸವಕ್ಕೆ ಶನಿವಾರ ಸಂಜೆ ಅದ್ಧೂರಿ ತೆರೆ ಎಳೆದಿದ್ದು, ಬೀದರ್​ನ ಲಿಂಗರಾಜ ಅಪ್ಪ ಇಂಜಿನಿಯರಿಂಗ್​ ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದ್ದು, ದೊಡ್ಡಪ್ಪ ಇಂಜಿನಿಯರಿಂಗ್​ ಕಾಲೇಜು ರನ್ನರ್​ ಅಪ್​ ಸ್ಥಾನ ಪಡೆಯಿತು.
ವಿವಿ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಜ್ಞಾನೋತ್ಸವ ಯಶಸ್ವಿಯಾಗಿದ್ದು, ಸಂತೋಷವನ್ನುಂಟು ಮಾಡಿದೆ. ಉತ್ಸವದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ಸಾಂಸ್ಕತಿಕ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ವಿವಿಧ ಸ್ಪರ್ಧೆಗಳು, ಕಾರ್ಯಾಗಾರಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬಿಸುತ್ತವೆ ಎಂದರು.
ಎಲ್ಲ ವಿದ್ಯಾರ್ಥಿಗಳು ಕೌಶಲ ಪ್ರದರ್ಶಿಸಿದ್ದು, ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮಾರ್ಗದಲ್ಲಿ ಮುನ್ನಡೆಯಬೇಕಿದೆ. ಭವಿಷ್ಯದಲ್ಲಿ ಇನ್ನಷ್ಟು ಅರ್ಥಪೂರ್ಣ, ಅದ್ದೂರಿ ಉತ್ಸವ ಆಗಬೇಕು. ಟೆಕ್ನೋ-ಕಲ್ಚರಲ್​ ಫೆಸ್ಟ್​ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದರು.
ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿರ್ದೇಶಕ ಚಂದ್ರಕಾಂತ ಪಾಟೀಲ್​ ಮಾತನಾಡಿ, ಶರಣಬಸವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವುದು ಸೌಭಾಗ್ಯವೇ ಸರಿ. ಅಧ್ಯಯನದೊಂದಿಗೆ ಮಾನವೀಯ ಮೌಲ್ಯ ಕಲಿಯುತ್ತೀರಿ. ಇಲ್ಲಿ ಕಲಿತವರು ಮುಂದೆ ಎಲ್ಲ ರಂಗಗಳಲ್ಲಿಯೂ ಯಶಸ್ಸನ್ನು ಕಾಣುವಿರಿ. ಶರಣಬಸವ ವಿವಿ ಅನೇಕ ತಾಂತ್ರಿಕ ಕೋರ್ಸ್​ ಅಳವಡಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಲಕ್ಷಿ$್ಮ ಪಾಟೀಲ್​ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ.ಕಿರಣ ಮಾಕಾ, ಸಂಶೋಧನಾ ಡೀನ್​ ಡಾ.ಸುಜಾತಾ ಮಲ್ಲಾಪುರ ಇತರರಿದ್ದರು. ಡೀನ್​ ಡಾ. ಶಿವಕುಮಾರ ಜವಳಿಗಿ ಸ್ವಾಗತಿಸಿದರು.
ಮೊಬೈಲ್​ ಹೆಚ್ಚು ಬಳಸದೇ ಹೆತ್ತವರಿಗೆ, ಗುರುಗಳಿಗೆ ಗೌರವ ನೀಡಿ, ಸಂಸತಿಯನ್ನು ರಸಬೇಕು. ಹೆಚ್ಚು ಪುಸ್ತಕಗಳನ್ನು ಓದಿ, ಅಂಕ ಗಳಿಕೆಗಷ್ಟೇ ಸೀಮಿತವಾಗದೇ ಕೌಶಲ ವೃದ್ಧಿಸಿ, ಸಾಧಕರಾಗಬೇಕು.
> ಚಂದ್ರಕಾಂತ ಪಾಟೀಲ್​, ನಿರ್ದೇಶಕ ಜೆಸ್ಕಾಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net