ಸುಂದರ ಸಮಾಜ ನಿರ್ಮಾಣಕ್ಕೆ ಸ್ವಚ್ಛತಾ ಸಿಬ್ಬಂದಿ ಶ್ರಮ

ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು. ಭಾರತಿ ದಂಡೋತಿ, ಎಸ್​.ಸಿ.ಪಾಟೀಲ್​, ಸಾಯಬಣ್ಣ ಕಾಶಿ, ವೆಂಕಟೇಶ, ಶಬಾನಾ ಬೇಗಂ, ವಿಠ್ಠಲ್​ ಹಾದಿಮನಿ ಇತರರಿದ್ದರು.
ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು. ಭಾರತಿ ದಂಡೋತಿ, ಎಸ್​.ಸಿ.ಪಾಟೀಲ್​, ಸಾಯಬಣ್ಣ ಕಾಶಿ, ವೆಂಕಟೇಶ, ಶಬಾನಾ ಬೇಗಂ, ವಿಠ್ಠಲ್​ ಹಾದಿಮನಿ ಇತರರಿದ್ದರು.
Published on: 

ಚಿತ್ತಾಪುರ: ಪಟ್ಟಣದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹೇಳಿದರು. ಕಿಂಗ್​ ಪ್ಯಾಲೇಸ್​ ಸಭಾಂಗಣದಲ್ಲಿ ಪುರಸಭೆವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರ ಕಾರ್ಮಿಕರು ನಿತ್ಯ ಬೆಳಗ್ಗೆ 5ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಜನರು ಏಳುವ ಮುನ್ನವೇ ಪಟ್ಟಣ ಸ್ವಚ್ಛತೆ ಮಾಡಿರುತ್ತಾರೆ. ಹೀಗಾಗಿ ಇವರಿಗೆ ಕೃತತೆ ಹಾಗೂ ಗೌರವ ಸಲ್ಲಿಸಬೇಕಿದೆ ಎಂದರು. ಸಿಪಿಐ ಎಸ್​.ಸಿ.ಪಾಟೀಲ್​ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮಕ್ಕಳ ಶಿಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಪೌರ ಕಾರ್ಮಿಕರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು. ಪೌರ ಕಾರ್ಮಿಕರ ಸಂದ ತಾಲೂಕು ಅಧ್ಯ ಸಾಯಬಣ್ಣ ಕಾಶಿ, ಉಪಾಧ್ಯ ವೆಂಕಟೇಶ, ಅಧಿಕಾರಿಗಳಾದ ಶಬಾನಾ ಬೇಗಂ, ವಿಠ್ಠಲ್​ ಹಾದಿಮನಿ, ಸುನೀಲ್​ ಕುಮಾರ, ಲೋಹಿತ್​ ಕಟ್ಟಿಮನಿ, ಶರಣಕುಮಾರ ಮುಕೆ, ಮುತ್ತಣ್ಣ ಭಂಡಾರಿ, ರವಿಶಂಕರ ಯಾದವ್​, ಕ್ರಾಂತಿದೇವಿ, ಮರೆಪ್ಪ, ರಾಜಕುಮಾರ, ಅಂಬಾರಾಯ, ಭೀಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net