ಕಲಬುರಗಿ: ನಗರದ ಎಂ.ಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ ಕ್ರಾಸ್ ಬಳಿ ಇಸ್ಪೀಟ್ ಆಟವಾಡುತ್ತಿದ್ದ 13 ಜನರ ಮೇಲೆ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ, 2.11 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಎಸಿಪಿ ಜೇಮ್ಸ್ ಮಿನೇಜ್ ಮಾರ್ಗದರ್ಶನದಲ್ಲಿ ಸಿಸಿಬಿ ಪಿಐ ಅರುಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ಅಶೋಕ ಕಟಕೆ, ರಾಜಕುಮಾರ ಗಂಧೆ, ಸುನೀಲ, ಶಿವಕುಮಾರ, ನಾಗರಾಜ ಅವರ ತಂಡ ಕಾರ್ಯಾಚರಣೆ ನಡೆಸಿದೆ. 13 ಜೂಜುಕೋರರಿಂದ ಪ್ರಕರಣ ದಾಖಲಿಸಲಾಗಿದೆ.