ಕುವೆಂಪು ನಗರದ ಹಡ್ಡಿ ಪಿಂಟ್ಯಾನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 13 ಪ್ರಕರಣ ದಾಖಲಾಗಿವೆ. 2012ರಿಂದ 2026ರವರೆಗೆ ಐಪಿಸಿ ಅಡಿ ಏಳು ಪ್ರಕರಣ, ಬಿಎನ್ಎಸ್ ಅಡಿ ಆರು ಪ್ರಕರಣ ದಾಖಲಾಗಿವೆ. ನಗರದ ವಿವಿಧೆಡೆ ಹೊಡೆದಾಟ, ಹಲ್ಲೆ, ಜೀವ ಭಯ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಸಾರ್ವಜನಿಕರ ಜೀವನಕ್ಕೆ ಶಾಂತಿ ಭಂಗ ಮಾಡುತ್ತಿದ್ದಾನೆ ಎಂದು ಸ್ಟೇಷನ್ ಬಜಾರ್ ಪಿಐ ಗುರುಲಿಂಗಪ್ಪ ಪಾಟೀಲ್ ವರದಿ ಆಧರಿಸಿ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ನಿರ್ದೇಶನದಂತೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ, ಆದೇಶಿಸಿದ್ದಾರೆ.