ಕಲಬುರಗಿಯ ಜೈಲಿನ ಜಾಮರ್​ ವ್ಯಾಪ್ತಿ ಕಡಿಮೆ ಮಾಡಿ

kalaburagi jail
kalaburagi jail
Published on

ಕಲಬುರಗಿ:

ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್​ ಜಾಮರ್​ನ ವ್ಯಾಪ್ತಿಯನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಸುತ್ತಲಿನ ಗ್ರಾಮಗಳ ಮೊಬೈಲ್​ ನೆಟ್ವರ್ಕ್​ ಸಮಸ್ಯೆ ತಕ್ಷಣ ಪರಿಹರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಕಾರಾಗೃಹದ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಕೈದಿಗಳು ಪರಾರಿಯಾದ ನಂತರ ಜೈಲಿನ ಮೊಬೈಲ್​ ಜಾಮರ್​ ವ್ಯಾಪ್ತಿ ಹೆಚ್ಚಿಸಿರುವುದಾಗಿ ತಿಳಿದು ಬಂದಿದ್ದು, ನಂದಿಕೂರ, ಸೀತನೂರ, ಪಾಣೆಗಾಂವ, ಶಿರನೂರ, ಖಣದಾಳ ಹಾಗೂ ಇಟಗಾ (ಕೆ) ಸೇರಿ ಸುತ್ತಲಿನ ಗ್ರಾಮಗಳ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೊಬೈಲ್​ ಕರೆ ಸರಿಯಾಗಿ ಸಿಗುತ್ತಿಲ್ಲ. ವಾಟ್ಸ್​ಆ್ಯಪ್​, ೋನ್​ಪೇ, ಗೂಗಲ್​ ಪೇ ಸೇರಿ ಡಿಜಿಟಲ್​ ಸೇವೆ ಸ್ಥಗಿತವಾಗಿವೆ. ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು, ಉದ್ಯೋಗಿಗಳು ಕಷ್ಟಕ್ಕೆ ಸಿಲುಕಿದ್ದಾರೆ. ಜೈಲಿನ ಭದ್ರತೆಗೆ ಧಕ್ಕೆಯಾಗದಂತೆ ಜಾಮರ್​ನ್ನು ತಾಂತ್ರಿಕವಾಗಿ ಮರುಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪವನಕುಮಾರ ವಳಕೇರಿ, ಸಂಗಮೇಶ ನಾಗನಹಳ್ಳಿ, ರವೀಂದ್ರ ವಿಭೂತಿ, ಸಂಗಣ್ಣಗೌಡ ಸೀತನೂರ, ಮಹಾದೇವಪ್ಪ ಪಾಟೀಲ್​, ಸೈಯದ್​ ಪಟೇಲ್​, ನಾಗಣ್ಣಗೌಡ, ಉಮೇಶ, ಶ್ರೀಕಾಂತ ಶಿರನೂರ, ಖಾದರ್​ ಪಟೇಲ್​, ಅಮೃತ, ಬಸವರಾಜ, ಸೈಬಣ್ಣ, ಅಮೋಗಿ, ಸಂತೋಷ, ಹಣಮಂತರಾಯ, ಸಿದ್ದುಗೌಡ ಸೀತನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net