ಲೆಕ್ಕ ಪತ್ರ, ದಾಖಲೆ ನೀಡುವುದಾದರೆ ಆರೆಸ್ಸೆಸ್ ಕಚೇರಿಗೆ ಬರಲು ಸಿದ್ಧ: ಪ್ರಿಯಾಂಕ್ ಖರ್ಗೆ ಸವಾಲು
priyank kharge
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನೋಂದಣಿ ಮಾಡಲ್ಲ, ಲೆಕ್ಕ ಕೊಡಲ್ಲ ಎಂಬುದು ಸರಿಯೇ?
ಚಾಯ್ ಪೇ ಚರ್ಚೆ ಮಾಡೋಣ ಎಂದು ಖರ್ಗೆ ಸವಾಲು
ಕಲಬುರಗಿ: ಕಾಂಗ್ರೆಸ್ ಪಕ್ಷ ಸೇರಿ ದೇವಸ್ಥಾನ, ಮಸೀದಿ, ಚರ್ಚ್ಗಳು ನೋಂದಣಿ ಮಾಡಿವೆ, ಮಾಡುತ್ತಲೂ ಇವೆ. ದೇಶದಲ್ಲಿ ಪ್ರತಿ ದೇಗುಲ, ಮಹಿಳಾ ಸೇರಿ ಸಂಘಟನೆಗಳು ಲೆಕ್ಕ ಕೊಡಬೇಕು. ಆದರೆ ಆರೆಸ್ಸೆಸ್‌ನವರು ನೋಂದಾಯಿಸಲ್ಲ, ಲೆಕ್ಕ ಕೊಡಲ್ಲ ಅನ್ನೋದು ಸರಿಯೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಇಡೀ ರಾಷ್ಟçದ ಕಣ್ಣು ನನ್ನ ಮೇಲಿದೆ. ಒಂದು ಸರಳ ಪ್ರಶ್ನೆ ಕೇಳಿz್ದೆ ಒಂದು ಸಂಘಟನೆಯವರಿಗೆ. ಪ್ರಧಾನಿಯವರು ಆರೆಸ್ಸೆಸ್‌ಗೆ ನಮನ ಸಲ್ಲಿಸುತ್ತಾರೆ. ಕೋಟ್ಯಂತರ ಜನ ಬೀದಿಗಿಳಿಯುತ್ತಾರೆ, ೨೦ ಲP್ಷÀ ಜನ ಸೇರ್ತಾರಂತೆ ಎನ್ನುವ ಸಂಘದವರ ಸಿದ್ಧಾಂತ ಬೇರೆ ಇರಬಹುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕಾನೂನು ಮತ್ತು ಸಂವಿಧಾನ ಎಲ್ಲರಿಗೂ ಒಂದೇ ಅಲ್ವ? ದಾಖಲೆ ತೋರಿಸಿ ಅಂದ್ರೆ ಪರದಾಡ್ತಾರೆ. ತೆರಿಗೆ ಕಟ್ಟಲ್ಲ ಅಂತಾರೆ ಏಕೆ ಎಂಬುದನ್ನು ತಿಳಿಸಿ. ಬೇಕಿದ್ದರೆ ನಾನೇ ಆರೆಸ್ಸೆಸ್ ಕಚೇರಿ ಬರುವೆ. ಚಾಯ್ ಪೇ ಚರ್ಚೆ ಮಾಡೋಣ. ನನ್ನ ಆಸ್ತಿ, ಬುದ್ಧವಿಹಾರ, ಮಕ್ಕಳ ಆಸ್ತಿ, ಅಣ್ಣನ ಆಸ್ತಿ ತೋರಿಸ್ತೇನೆ ಎಂದು ಸವಾಲು ಹಾಕಿದರು.
ಮುನುಸ್ಮÊತಿ ಆಡಳಿತ ಎಂದವರು ಸಂವಿಧಾನ ಬಿಟ್ಟರೇಕೆ? ರಾಷ್ಟç ಧ್ವಜ ಏಕೆ ಹಾರಿಸಿಲ್ಲ ಎಂದು ಕೇಳೋದು ತಪ್ಪಾ? ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಮಾಡಿದ್ದು ಆರೆಸ್ಸೆಸ್. ಚಂಪಕರಾಯ್ ವಿಎಚ್‌ಪಿ, ಗೋಳ್ವಾಳ್ಕರ್, ಕರ್ನಾಟಕದ ಗೋಪಾಲರಾವ್ ಎಂಬಾತ ಮರ್ಯಾದೆ ತೆಗೆಯುತ್ತಿz್ದÁರೆ. ಅಮಿತ್ ಮಿಶ್ರಾ ಆರೆಸ್ಸೆಸ್‌ವರು. ಕೋಟ್ಯಂತರ ರೂ. ಗಾಯಬ್ ಆಗಿದೆ. ಮೋದಿ ಮನ್ ಕೀ ಬಾತ್ ಮೌನವಾಗಿದೆ. ಅಡಿಗಲ್ಲು, ಪೂಜೆ ಮಾಡಿದ್ದು ಮೋದಿ. ಎಲ್ಲ ವೇಳೆಯಲ್ಲೂ ಮೋದಿ ಜೈ, ಚಂದಾ ಚೋರಿ ಆದಾಗಲೂ ಮೋದಿ ಕೀ ಜೈ ಅನ್ನಬೇಕು ಅಲ್ಲವೇ? ಎಂದು ಹರಿಹಾಯ್ದರು.
ಕದ್ದವರೇ ಆರೆಸ್ಸೆಸ್‌ನವರು. ವಾಪಸ್ ಕೊಟ್ಟು ಕ್ಷಮೆ ಕೇಳಲಿ. ಏನೂ ಇಲ್ಲದೆ ಪ್ರಶ್ನೆ ಮಾಡ್ತಿದ್ದೆ. ಈಗ ಕಟ್ಟಿಗೆ ಕೊಟ್ಟಿದ್ದೀರಿ, ದಾಂಡಿಯಾ ಆಡಲ್ಲ. ಅಮಿತ್ ಷಾ ದಾಖಲೆ ಕೇಳಿದ್ದಾರಂತೆ ನನ್ನದು. ದೇಶ ಉಳಿಸಲು ಜೈಲಿಗೆ ಹೋಗಲೂ ಸಿದ್ಧ. ಯಾವುದೇ ಬೆದರಿಕೆಗೆ ಜಗ್ಗಲ್ಲ- ಬಗ್ಗಲ್ಲ. ಬಸವಣ್ಣ, ಬುದ್ಧ, ಅಂಬೇಡ್ಕರ್ ಹೆಸರು ಇವರ ಬಾಯಲ್ಲಿ ಬರುವವರಿಗೆ ನಾನು ಕಾಡುತ್ತೇನೆ ಎಂದರು.