ಸಮ್ಮೇಳನಾಧ್ಯಕ್ಷರಾಗಿ ರಾಜೇಂದ್ರ ಝಳಕಿ ಆಯ್ಕೆ

ರಾಜೇಂದ್ರ ಕೋರಬಾ
ರಾಜೇಂದ್ರ ಕೋರಬಾ
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಸಾಹಿತ್ಯ ಸಮ್ಮೇಳನ 19ರಂದು
ಕಲಬುರಗಿ:ಜಿ ಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂ ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಗಳ ಸಹಯೋಗದಲ್ಲಿ ಜುಲೈ 19ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿರುವ ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಶಿಕ್ಷಕ, ಸಾಹಿತಿ ರಾಜೇಂದ್ರ ಕೋರಬಾ ಝಳಕಿ ಆಯ್ಕೆಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿರುವ ರಾಜೇಂದ್ರ ಕೋರಬಾ ಝಳಕಿ ಅವರು ಪ್ರವೃತ್ತಿಯಿಂದ ಸಾಹಿತಿಯಾಗಿ, ಹಿರಿಯ ಸಾಹಿತಿ ಪೊ.ವಸಂತ ಕುಷ್ಠಗಿ ಹಾಗೂ ಡಾ.ಸ್ವಾಮಿರಾವ ಕುಲಕರ್ಣಿ ಅವರ ಪ್ರೇರಣಿಯಿಂದ ಸಾಹಿತ್ಯ ೇತ್ರದಲ್ಲಿ ಗುರುತಿಸಿಕೊಂಡಿರುವ ಅವರು, ಆಳಂದ ತಾಲೂಕಿನ ಝಳಕಿ (ಬಿ) ಗ್ರಾಮದವರು.
ಕೋರಾ ಎಂಬ ಕಾವ್ಯನಾಮ, ಚಂದ್ರರಾಜ ಎಂಬ ವಚನಾಂಕಿತದಿಂದ ಜಿಲ್ಲೆಯಲ್ಲಿ ಗುರುತಿಸಿಕೊಂಡ ಇವರು, ಕಲ್ಲರಳಿನ ಕರುಳು, ಚಿಗುರು ಚೇತನ, ಬೆಳಸುಗಳು, ತಾತಾ ಎಂಬ ನಾತ ಎಂಬ ನಾಟಕ ಕೃತಿ. ಅಕ್ಷರ ಅರಿವು ಮಕ್ಕಳ ಸಾಹಿತ್ಯ ಕೃತಿ, ನೀಲಕಂಠ ಅಭಿನಂದನಾ ಗ್ರಂಥ ಹೀಗೆ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಚಂದ್ರರಾಜ ಎನ್ನುವ ವಚನಾಂಕಿತದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಆಧುನಿಕ ವಚನ ರಚಿಸಿದ್ದಾರೆ. ಮಕ್ಕಳಲ್ಲಿ ಜಾನಪದ ಸಾಹಿತ್ಯ ಅರಿವು ಮೂಡಿಸುವಲ್ಲಿ ಅನೇಕ ಜನಪದ ಹಾಡು ಹೇಳುವ ಮೂಲಕ ತಾವೊಬ್ಬ ಜನಪದ ಕವಿ ಎಂದೂ ಗುರುತಿಸಿಕೊಂಡಿದ್ದಾರೆ.
ಕನ್ನಡ ರತ್ನ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ, ರಾಷ್ಟ್ರೀಯ ಬಸವ ರತ್ನ, ಕವಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net