ಬೆಳೆ ಹಾನಿ, ವಿಮೆ ಪರಿಹಾರ ನೀಡಿ: ಶಾಸಕ ಮತ್ತಿಮಡು ಸೂಚನೆ

Crop insurance
Crop insurance
Published on

ಪ್ರಮುಖ ಮುಖ್ಯಾಂಶಗಳು

  • ಲಾಡಮುಗಳಿ, ಲೇಂಗಟಿ ರೈತರಿಗೆ ಮೋಸ
ಕಲಬುರಗಿ: ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಲಾಡಮುಗಳಿ, ಲೇಂಗಟಿ ಗ್ರಾಮದ ರೈತರು ಬೆಳೆ ವಿಮೆ ಹಣ ಕಟ್ಟಿದ್ದು, ವಿಮೆ ಕಂಪನಿ ನೀಡಬೇಕಿದ್ದ ಬೆಳೆ ವಿಮೆ ಪರಿಹಾರ ಶೂನ್ಯ ಬಂದಿದೆ. ಇದಕ್ಕೆ ಕಾರಣ ಬೆಳೆ ಹಾನಿ ಸಮೀೆ ವೇಳೆ ಕೇವಲ ಶೇ.1.50 ಬೆಳೆ ಹಾನಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಕಟ್ಟಿದ ಹಣವೂ ವಾಪಸ್​ ಬಂದಿಲ್ಲ ಎಂದು ಲೇಂಗಟಿ, ಲಾಡಮುಗಳಿ ರೈತರು ಶಾಸಕ ಬಸವರಾಜ ಮತ್ತಿಮಡು ಬಳಿ ಅಳಲು ತೋಡಿಕೊಂಡರು.
ನಗರದ ಗೃಹ ಕಚೇರಿಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಶಾಸಕ ಮತ್ತಿಮಡು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್​ ಪಟೇಲ್​, ಜಿಲ್ಲಾ ಸಂಖ್ಯಾಸಂಗ್ರಹಣ ಅಧಿಕಾರಿ ಇಮ್ರಾನ್​ ಅಲಿ, ಸಹಾಯಕ ಸಾಂಕಿಕ ಅಧಿಕಾರಿ ದಾದಾ ಗೌಡ ಅವರನ್ನು ಸ್ಥಳಕ್ಕೆ ಕರೆಸಿ, ರೈತರೆದುರೆ ಚರ್ಚಿಸಿದರು.
ಲೇಂಗಟಿ, ಲಾಡಮುಗಳಿ ಅಕ್ಕಪಕ್ಕದ ಗ್ರಾಮಗಳಲ್ಲಿ ಶೇ.80, 90 ಬೆಳೆ ಹಾನಿ ಎಂದು ಸಮೀೆಯಲ್ಲಿ ತೋರಿಸಲಾಗಿದೆ. ಈ ಎರಡು ಗ್ರಾಮಗಳಲ್ಲಿ ಹೇಗೆ ಕೇವಲ ಶೇ.1.50 ಬೆಳೆ ಹಾನಿ ಆಗುತ್ತದೆ. ಕನಿಷ್ಠ ಪ್ರಜ್ಞೆ ಇಲ್ಲದಂತೆ ವರದಿ ತಯಾರಿಸಲಾಗಿದೆ ಎಂದು ರೈತರು ಶಾಸಕರ ಎದುರು ಅಳಲು ತೋಡಿಕೊಂಡರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ದಾಖಲೆ ಪ್ರಮಾಣದಲ್ಲಿ ಮಳೆ ಬಂದು ಬೆಳೆ ಹಾನಿಯಾಗಿದೆ. ಆದರೂ ಶೇ.1 ಮಾತ್ರ ಬೆಳೆ ಹಾನಿ ಎಂದು ತೋರಿಸಿದರೆ ಗತಿ ಏನು?. ಬೇಕಾಬಿಟ್ಟಿ ವರದಿ ತಯಾರಿಸಲಾಗಿದೆ. ಕೂಡಲೇ ತಪ್ಪು ಸರಿಪಡಿಸಿ, ಬೆಳೆ ವಿಮೆ ಪರಿಹಾರ ಬರುವಂತೆ ಮಾಡಬೇಕು ಎಂದು ಸೂಚಿಸಿದರು.
ಬೆಳೆ ವಿಮೆ ಸಮೀೆ ಉಲ್ಲೇಖದ ವೇಳೆ ಗೊಂದಲ ಆಗಿದ್ದು, ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ ಪತ್ತೆ ಹಚ್ಚಿ, ಬೆಳೆ ವಿಮೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.
ಮುಖಂಡರಾದ ಸತೀಶ ಸೊರಡೆ, ಬಸಯ್ಯ ಮಠಪತಿ, ಕಿರಣ ಖೇಮಶೆಟ್ಟಿ, ರಾಜಕುಮಾರ ಪೊಲೀಸ್​ ಪಾಟೀಲ್​, ನಿಜಾಮ ದೋಮಾ, ಅನಿಲ ಕುದಮುಡ, ಸಾಯಿಬಣ್ಣ ಪೂಜಾರಿ, ರಾಜು ಪೂಜಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net