ಈರಣ್ಣ ಅವರ ಮಗಳು, ಮೊಮ್ಮಕಳ ಜತೆಗೆ ರಾತ್ರಿ ಊಟ ಮಾಡಿ, 11ಗಂಟೆ ಸುಮಾರಿಗೆ ಮಾಳಿಗೆಯಲ್ಲಿ ಮಲಗಿದ್ದಾರೆ. ಮಧ್ಯರಾತ್ರಿ ಕಳ್ಳತನ ಮಾಡಲಾಗಿದೆ. ರಾತ್ರಿ 3.30ಗಂಟೆ ಸುಮಾರಿಗೆ ಮಳೆ ಬರುತ್ತಿದೆ ಎಂದು ಕೆಳಗೆ ಬಂದಾಗ ಬಾಗಿಲು ಮುರಿದಿದ್ದು, ಕಳವು ಆಗಿದ್ದು, ತಿಳಿದಿದೆ. ಪರಿಶೀಲಿಸಿದಾಗ ಮನೆಯಲ್ಲಿದ್ದ 35 ಗ್ರಾಂ ಬಂಗಾರದ ಆಭರಣ, 14.5 ಗ್ರಾಂ ಬೆಳ್ಳಿ ಆಭರಣ, ನಗದು ಸೇರಿ ಒಟ್ಟು 2.95 ಲಕ್ಷ ರೂ. ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ ಎಂದು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.