ಕಡಗಂಚಿಯಂತ ಸಣ್ಣ ಗ್ರಾಮದಿಂದ ಆರಂಭಿಸಿ ರಾಜ್ಯ, ರಾಷ್ಟ್ರ, ವಿಶ್ವ ಮಟ್ಟಕ್ಕೆ ಉದ್ಯಮ ಲೋಕವನ್ನು ಕಟ್ಟಿ ಬೆಳೆಸಲು ಎಸ್.ಎಸ್.ಪಾಟೀಲ್ ಅವರ ಕುಟುಂಬದ ಸತ್ಯ, ಶುದ್ಧ, ಕಾಯಕವೇ ಕಾರಣ ಎಂದು ಎಸ್.ಎಸ್.ಪಾಟೀಲ್ ೌಂಡೇಷನ್ ಅಧ್ಯಕ್ಷ, ಕಸಾಪ ಮಾಜಿ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.
ನಗರದ ಸೇಡಂ ರಸ್ತೆಯ ಎಂ.ಆರ್.ಎಂ.ಸಿ ಸ್ಯಾಕ್ ಸಭಾಂಗಣದಲ್ಲಿ ಎಸ್.ಆರ್.ಪಾಟೀಲ್ ಫೌಂಡೇಷನ್ ಹಾಗೂ ಪಾಟೀಲ್ ಗ್ರ್ೂ ಆಫ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ "ಕರ್ಮಯೋಗಿ ಎಸ್.ಎಸ್.ಪಾಟೀಲರ 4ನೇ ಪುಣ್ಯಸ್ಮರಣೆ ಹಾಗೂ ಎಂಟು ಸಾಧಕರಿಗೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತನು, ಮನ, ಧನವನ್ನು ಅರ್ಪಿಸಿ, ಕರ್ತವ್ಯ ಮತ್ತು ಜೀವನದಲ್ಲಿ ಸತ್ಯ ಶುದ್ಧತೆಯನ್ನು ಕಾಪಾಡಿಕೊಂಡಿದ್ದವರು ಡಾ.ಎಸ್.ಎಸ್.ಪಾಟೀಲ್. ಇಂದು ವಿಶ್ವದ ಅತಿ ಎತ್ತರದ ಚೇನಾಬ್ ಸೇತುವೆ ಮೇಲೆ ವಂದೇ ಭಾರತ್ ರೈಲು ಸಾಗುವ ರೈಲು ಹಳಿ ಸಿದ್ಧಪಡಿಸುವುದು ಪಾಟೀಲ್ ಗ್ರೂಪ್ಸ್ ಎಂಬುದು ಇಡೀ ಕಲಬುರಗಿ, ಕಲ್ಯಾಣ ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದರು.
ಪ್ರಶಸ್ತಿ ಪುರಸತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ಕಾಯಕವನ್ನು ಗುರುತಿಸಿ, ಗೌರವಿಸುವುದು ವಿರಳ. ಪಾಟೀಲ್ ಕುಟುಂಬವೂ ವಿಶ್ವಶ್ರೇಷ್ಠ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಿದ್ದು, ಅವರ ಸೇವೆಯೂ ಇನ್ನಷ್ಟು ಉತ್ತುಂಗಕ್ಕೆ ಏರಲಿ. ಕಾಯಕ, ದಾಸೋಹವೂ ಮುಂದುವರಿಯಲಿ ಎಂದು ಹಾರೈಸಿದರು.
ಪಾಟೀಲ್ ಗ್ರೂಪ್ ಆ್ ಕಂಪನಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಾದ ನಾಗೇಶ ಭೂಬಾರ, ಅನೀಲಕುಮಾರ ಕಲಬುರಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಶ್ರೀನಿವಾಸ ಸರಡಗಿಯ ಶ್ರೀ ಅಪ್ಪಾರಾವ ದೇವಿ ಮುತ್ಯಾ, ಫೌಂಡೇಷನ್ ಗೌರವಾಧ್ಯಕ್ಷೆ ಸರೋಜಿನಿದೇವಿ ಪಾಟೀಲ್, ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಲಿಂಗರಾಜ ಪಾಟೀಲ್, ನಿರ್ದೇಶಕ ಸಿದ್ಧಲಿಂಗ ಪಾಟೀಲ್, ಎಚ್ಕೆಇ ಅಧ್ಯಕ್ಷ, ಎಂಎಲ್ಸಿ ಶಶೀಲ ನಮೋಶಿ, ಉಪಾಧ್ಯಕ್ಷ ರಾಜು ಭೀಮಳ್ಳಿ, ಬಸಂತಕುಮಾರ ಪಾಟೀಲ್, ಉಮೇಶ ಶೆಟ್ಟಿ, ಪದ್ಮಜಾ ಪಾಟೀಲ್ ಇತರರಿದ್ದರು. ಡಾ.ಶೋಭಾ ಬೆಂಬಳಗಿ, ಕಾರ್ತಿಕ ಸ್ವಾಗತಿಸಿದರು.