ಕಲಬುರಗಿ: ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಗೋವುಗಳನ್ನು ಸಬ್ ಅರ್ಬನ್ ಪೊಲೀಸ್ ಠಾಣೆ ಪೊಲೀಸರು ರಸಿದ್ದಾರೆ. ಆಳಂದ ಚೆಕ್ಪೋಸ್ಟ್ ಹತ್ತಿರ ಅಕ್ರಮವಾಗಿ ಬುಲೆರೋ ಪಿಕ್ಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಇಟ್ಟಿರುವ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಸಬ್ ಅರ್ಬನ್ ಪಿಎಸ್ಐ ಶಶಿಕಲಾ ಅವರ ತಂಡ ಪರಿಶೀಲಿಸಿ, ಚಾಲಕನ ವಿಚಾರಿಸಲಾಗಿ ರಾಣೇಶ್ವರ ಪೀರ್ ದರ್ಗಾದ ಮಹ್ಮದ್ ಅಮೇರ್ ಗೂರ್ ಎಂದು ತಿಳಿಸಿದ್ದು, ದಾಖಲೆ ಕೇಳಿದಾಗ ಇಲ್ಲ ಎಂದು ಓಡಿ ಹೋಗಿದ್ದಾನೆ. ನಂತರ ವಾಹನ ಸಮೇತ ಎರಡು ಕೆಂಪು ಕರು, ಎರಡು ಜೆರ್ಸಿ ಕರು, ನಾಲ್ಕು ಬಿಳಿ ಬಣ್ಣದ ಕರುಗಳನ್ನು ರಸಿ, ಸ್ವಾಮಿ ಸಮರ್ಥ ಗೋಶಾಲೆಯಲ್ಲಿ ಬಿಡಲಾಗಿದೆ. ಈ ಕುರಿತು ಸಬ್ ಸರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಗೋವುಗಳ ಅಕ್ರಮ ಸಾಗಣೆ ತಡೆಗೆ ಸಾಥ್ ನೀಡಿ, ಮಾಹಿತಿ ಒದಗಿಸಿದ್ದರು ಎನ್ನಲಾಗಿದೆ.