ರಾವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಖಾದ್ರಿ ವೃತ್ತದ ಸಮೀಪದ ಅವಟೆ ಆಸ್ಪತ್ರೆ ಪಕ್ಕದ ಮನೆಯವರು 112ಗೆ ಕರೆ ಮಾಡಿ, ನಮ್ಮ ಮನೆ ಎದುರು ಸಮಸ್ಯೆ ಉಂಟಾಗಿದೆ ಬನ್ನಿ ಎಂದು ತಿಳಿಸಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿದಾಗ "ಸುಮಾರು ಮೂರು ದಿನದ ಹಿಂದೆ ನಮ್ಮ ಮನೆ ಮುಂದೆ ಹೆಗ್ಗಣ್ಣ ಸತ್ತು ಬಿದ್ದಿದ್ದು, ಮಹಾನಗರ ಪಾಲಿಕೆಯವರಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ರೀತಿಯಿಂದ ಸ್ಪಂದಿಸಿಲ್ಲ. ಆದ್ದರಿಂದ ನಾವು 112ಗೆ ಕರೆ ಮಾಡಿದ್ದೇವೆ. ದಯಮಾಡಿ ಸತ್ತು ಬಿದ್ದಿರುವ ಹೆಗ್ಗಣ್ಣವನ್ನು ತೆಗೆದುಕೊಂಡು ಹೋಗಬೇಕು ಎಂದು ಕೋರಿದ್ದಾರೆ. ನಂತರ ಸತ್ತು ಬಿದ್ದ ಹೆಗ್ಗಣವನ್ನು ಬೇರೆ ಕಡೆ ಬಿಸಾಕಿದ ನಂತರ ಪ್ರಕರಣ ಸುಖಾಂತ್ಯ ಕಂಡಿದೆ.